ಶ್ರೀರಾಮಸೇನೆಯ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರವರ 70 ನೇ ಹುಟ್ಟು ಹಬ್ಬವನ್ನು ಸಂಘಟನೆ ಹಾಗೂ ಅಭಿಮಾನಿಗಳ ವತಿಯಿಂದ ನಿಟ್ಟೂರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಇಂದು ಆಚರಿಸಲಾಯಿತು. ದಿನದ ಎಲ್ಲಾ ಪೂಜಾ ಸೇವೆಗಳು ಮತ್ತು ಬೆಳಿಗ್ಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆಯನ್ನು ನೆರವೇರಿಸಿ, ಸಿಹಿಯನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಡಾ. ವಿಜಯೇಂದ್ರ ವಸಂತ್ ರಾವ್ ಮತ್ತು ದೇವಸ್ಥಾನದ ಮೇನೆಜರ್ ರಮೇಶ್ ತುಂಗಾ ಮಾತನಾಡಿದರು.
ನಗರ ಸಭಾ ಸದಸ್ಯ ಸಂತೋಷ್ ಜತ್ತನ್, ಉದ್ಯಮಿ ರಂಜನ್ ಶೆಟ್ಟಿ, ರಾಜೇಶ್ ಅಮಿನ್, ರಾಜ ಹನುಮಂತನಗರ, ರಾಜೇಶ್ ಪೂಜಾರಿ, ಅರುಣ್, ಶ್ರೀರಾಮಸೇನೆಯ ಮುಖಂಡರಾದ ಜಯರಾಂ ಅಂಬೆಕಲ್ಲು, ಶರತ್ ಮಣಿಪಾಲ, ಸುಜೀತ್ ನಿಟ್ಟೂರು, ನರೇಂದ್ರ, ಜೀವನ್ ಪೂಜಾರಿ, ಪ್ರವೀಣ್ ಪೂಜಾರಿ ಶಿವಪುರ ಮೊದಲಾದವರು ಉಪಸ್ಥಿತರಿದ್ದರು.