Header Ads Widget

ರೇಡಿಯೊ ಮಣಿಪಾಲದಲ್ಲಿ ಅಮೇರಿಕಾದ ಪ್ರಶಾಂತ್ ಮಟ್ಟು ಅವರ ಮನದ ಮಾತು


ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ 90.4 Mhz ಅರ್ಪಿಸುತ್ತಿರುವ ವಿಶೇಷ ಕಾರ್ಯಕ್ರಮದಲ್ಲಿ ಜನವರಿ ತಿಂಗಳ ದಿನಾಂಕ 11 ರಂದು ಶನಿವಾರ ಸಂಜೆ 6.30ಕ್ಕೆ ಅಮೇರಿಕಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಡುಪಿ ಜಿಲ್ಲೆಯವರೇ ಆಗಿರುವ ಪ್ರಶಾಂತ್ ಕುಮಾರ್ ಮಟ್ಟು ತಮ್ಮ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಲಿದ್ದಾರೆ. ಜನವರಿ 12 ರಂದು ಮಧ್ಯಾಹ್ನ 2.30ಕ್ಕೆ ಇದರ ಮರುಪ್ರಸಾರವಿರುವುದು. 

ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal

ಮತ್ತು ಐಫೋನ್ ನ

https://itunes.apple.com/app/id6447231815 ಲಿಂಕ್ ಮೂಲಕವೂ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.