Header Ads Widget

ಮುಡಿಪು ಚರ್ಚ್‌ನಲ್ಲಿ ಕಳ್ಳತನ!

ಮುಡಿಪುವಿನಲ್ಲಿರುವ ಸೇಂಟ್‌ ಜೋಸೆಫ್‌ ವಾಝ್ ಚರ್ಚ್‌ಗೆ ಕಳ್ಳ ಒಬ್ಬ ನುಗ್ಗಿ ಪರಮಪ್ರಸಾದ ಇಡುವ ಪೆಟ್ಟಿಗೆಯನ್ನ ಒಡೆದು ಪರಮಪ್ರಸಾದ ಹಂಚುವ ವಸ್ತು ಹಾಗೂ ಕಾಣಿಕೆಗೆ ಹಾಕಿರುವ ಹಣವನ್ನು ಕಳವು ಮಾಡಿದ್ದಾನೆ. ಕಳವು ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.‌

ಜ.24ರಂದು ರಾತ್ರಿ ಕಳ್ಳ ಚರ್ಚ್‌ನ ಬಾಗಿಲು ಮುರಿದು ಒಳನುಗ್ಗಿದ್ದಾನೆ. ತಲೆಗೆ ಬಟ್ಟೆ ಕಟ್ಟಿ, ಮುಖಕ್ಕೆ ಮಾಸ್ಕ್ ಧರಿಸಿ ಎಂಟ್ರಿ ಕೊಟ್ಟಿದ್ದಾನೆ. ಬೆಳ್ಳಿಗೆ ಚರ್ಚ್ ಓಪನ್ ಮಾಡಿದಾಗ ಕಳವಾಗಿರುವುದು ಗೊತ್ತಿಗಿದೆ, ಕೂಡಲೇ ಚರ್ಚ್ ಪದಾಧಿಕಾರಿಗಳು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.