ಉಡುಪಿ ಕೋ ಆಪರೇಟಿವ್ ಟೌನ್ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಗೆ ಈ ಹಿಂದಿನ ಅಧ್ಯಕ್ಷರಾಗಿದ್ದ ಎಚ್ .ಜಯಪ್ರಕಾಶ್ ಕೆದ್ಲಾಯರ ತಂಡದ ಸದಸ್ಯರಾದ ಪ್ರಹ್ಲಾದ್ ಬಲ್ಲಾಳ್ ಎನ್ˌ ಭಾಸ್ಕರ ರಾವ್ ಕಿದಿಯೂರುˌ ಮುರಳೀಧರ ಭಟ್ ಕೆ, ರವೀಂದ್ರ ಪಿ.ಎನ್ˌ ಪಿ. ರಾಘವೇಂದ್ರ ಭಟ್ ˌ ಪಿ. ಶ್ರೀಪತಿ ರಾವ್ˌ ಸೀತಾರಾಮ ಕೇಕುಡˌ ಸೂರ್ಯಪ್ರಕಾಶ್ ರಾವ್ ಎನ್ˌ ಹಾಗೂ ಮಹಿಳಾ ಪ್ರಾತಿನಿಧ್ಯದಲ್ಲಿ ಮನೋರಮಾ ಎಸ್. ಹಾಗೂ ರೂಪ ಮೋಹನ್ ಭಾರಿ ಅಂತರದಿಂದ ಗೆಲುವು ಸಾಧಿಸಿರುತ್ತಾರೆ.
ಬ್ಯಾಂಕಿನ ಚುನಾವಣೆಯನ್ನು ನಡೆಸಿಕೊಟ್ಟ ಸಹಕಾರ ಸಂಘಗಳ ಉಪ ನಿಪಂಧಕರು ರಿರ್ಟನಿಂಗ್ ಅಧಿಕಾರಿ ಲಾವಣ್ಯ .ಕೆ.ಆರ್ˌ ಇವರು ಚುನಾವಣಾ ಫಲಿತಾಂಶವನ್ನು ಘೋಷಣೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಮತದಾನ ಚಲಾಯಿಸಿದ ಬ್ಯಾಂಕಿನ ಎಲ್ಲಾ ಮತದಾರ ಸದಸ್ಯರಿಗೆ ಜಯಪ್ರಕಾಶ್ ಕೆದ್ಲಾಯರು ಕ್ರತಜ್ಞತೆ ಸಲ್ಲಿಸಿದರು.