ಉಡುಪಿ: ಸುವರ್ಣ ವರ್ಷವನ್ನು ಆಚರಿಸುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗವು, ಪ್ರಥಮ ಪಿಯುಸಿ ಯಲ್ಲಿ ಓದುತ್ತಿರುವ, ಕೊಡವೂರು ಬಾಚನಕೆರೆಯ ವಿದ್ಯಾಪೋಷಕ್ ವಿದ್ಯಾರ್ಥಿ, ತನುಷ್ ಗೆ, ಶಿರ್ವದ ನಿವೃತ್ತ ಉಪನ್ಯಾಸಕಿ ಶಾರದಾ ಎಂ. ಇವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ 62ನೇ ಮನೆ 'ಗೌರೀತನಯ' ಇಂದು(26-1-2025) ಉದ್ಘಾಟನೆಗೊಂಡಿತು.ಎ.ವಿ.ಬಾಳಿಗಾ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ, ಡಾ ಪಿ.ವಿ.ಭಂಡಾರಿ ಈ ಸಂದರ್ಭದಲ್ಲಿ ಮಾತನಾಡಿ, ಯಕ್ಷಗಾನ ಕಲಾರಂಗವು ಕಲಾವಿದರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನನ್ಯ ಸೇವೆಯನ್ನು ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳ ಆಪ್ತ ಸಮಾಲೋಚನೆ ಬಹಳ ಮುಖ್ಯ. ಈ ದಿಸೆಯಲ್ಲಿ ನಮ್ಮ ಆಸ್ಪತ್ರೆಯ ಸಹಯೋಗದೊಂದಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸೋಣ ಎಂದು ನುಡಿದು, ಉಪನ್ಯಾಸಕಿಯಾಗಿ ಶಾರದಾ ಮೇಡಂ ತನ್ನ ವಿದ್ಯಾರ್ಥಿಗಳ ಬಗ್ಗೆ ತೋರುತ್ತಿದ್ದ ಕಾಳಜಿಯನ್ನು ಸ್ಮರಿಸಿಕೊಂಡರು. ಇನ್ನೋರ್ವ ಮನೋತಜ್ಞರಾದ ಡಾ. ವಿರೂಪಾಕ್ಷ ದೇವರಮನೆಯವರು ಮಾತನಾಡಿ ಯಕ್ಷಗಾನ ಕಲಾರಂಗವು ತನ್ನ ಕಾರ್ಯ ಚಟುವಟಿಕೆಯಲ್ಲಿ ನಿರಂತರತೆಯನ್ನು ಕಾಪಿಟ್ಟುಕೊಂಡು, ನಾಡಿನ ಸಹೃದಯರ ಮೆಚ್ಚುಗೆ ಗಳಿಸಿದ ಅಪೂರ್ವ ಸಂಸ್ಥೆ ಎಂದು ಹರ್ಷ ವ್ಯಕ್ತಪಡಿಸಿದರು. ಜ್ಯೋತಿ ಬೆಳಗಿಸಿ ಮನೆಯನ್ನು ಉದ್ಘಾಟಿಸಿದ ಶಾರದಾ ಮೇಡಂ ಈ ಸಂದರ್ಭದಲ್ಲಿ ಮಾತನಾಡಿ, ತಾನು ನಿಮಿತ್ತ ಮಾತ್ರ.ಇಡೀ ಮನೆಯ ನಿರ್ಮಾಣದ ಹೊಣೆಗಾರಿಕೆ ಸಂಸ್ಥೆಯದ್ದಾಗಿದೆ.ಇದು ತನ್ನ ಬದುಕಿನ ಸಾರ್ಥಕ ಕ್ಷಣ. ಮುಂದೆಯೂ ಸಂಸ್ಥೆಯೊಂದಿಗೆ ತಾನಿರುತ್ತೇನೆ ಎಂದು ಹೃದಯ ತುಂಬಿ ಹರ್ಷ ವ್ಯಕ್ತಪಡಿಸಿದರು. ಪ್ರೀಮಿಯರ್ ಬಿಲ್ಡರ್ ನ ಮಾಲಕರಾದ ಶ್ರೀ ಹರೀಶ್ ಬಿ.ಶಾರದಾ ಮೇಡಂ ಸಹೋದರ ಕೃಷ್ಣ ಭಟ್ ಎಂ., ಸಹೋದರಿ ಸರೋಜಾ, ಅವರ ಪತಿ ಶ್ರೀನಿವಾಸ್ ಶಾಸ್ತ್ರಿ, ಇನ್ನೋರ್ವ ಸಹೋದರಿ ಶಿವಸುಂದರಿ, ಅವರ ಪತಿ ಡಾ. ಗಣರಾಜ್, ನಿವೃತ್ತ ಉಪನ್ಯಾಸಕರಾದ ಸುಬ್ರಮಣ್ಯ ಭಟ್ ಕೆ.ಡಾ.ಪರೀಕ್ಷಿತ್, ಆಪ್ತ ಸಹಾಯಕಿ ಸೌಜನ್ಯಾ, ದಾನಿಗಳಾದ ಡಾ.ಎಂ. ಆರ್.ಹೆಗಡೆ, ಯು.ಎಸ್.ರಾಜಗೋಪಾಲ ಆಚಾರ್ಯ,ಶ್ರೀಪತಿ ಕಾಮತ್, ಮುಖ್ಯೋಪಾಧ್ಯಾಯ ಎಚ್.ಎನ್. ವೆಂಕಟೇಶ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದ ಕಾರ್ಯಕ್ರಮದ ಕೊನೆಗೆ ಜೊತೆ ಕಾರ್ಯದರ್ಶಿ ನಾರಾಯಣ ಎಂ . ಹೆಗಡೆ ಧನ್ಯವಾದ ಸಲ್ಲಿಸಿದರು.ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್.ವಿ.ಭಟ್, ವಿ. ಜಿ. ಶೆಟ್ಟಿ, ಕೊಶಾಧಿಕಾರಿ ಪ್ರೊ.ಕೆ. ಸದಾಶಿವ ರಾವ್,ಜೊತೆ ಕಾರ್ಯದರ್ಶಿ ಹೆಚ್.ಎನ್. ಶೃಂಗೇಶ್ವರ ಮತ್ತು ಸಂಸ್ಥೆಯ ಸದಸ್ಯರಾದ ಡಾ.ರಾಜೇಶ್ ನಾವು ಭುವನಪ್ರಸಾದ್ ಹೆಗ್ಡೆ,ಪೃಥ್ವಿರಾಜ್ ಕವತ್ತಾರ್,ನಿರಂಜನ ಭಟ್,ಗಣಪತಿ ಭಟ್,ಕೆ.ಅಜಿತ್ ಕುಮಾರ್, ಮಂಜುನಾಥ,ದಿನೇಶ್ ಪೂಜಾರಿ,ನಾಗಭೂಷಣ ಭಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಾರಂಭವನ್ನು ಸ್ಮರಣೀಯಗೊಳಿಸಿದರು.