Header Ads Widget

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್(ರಿ), ಉಡುಪಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಇತ್ತೀಚಿಗೆ ಲೋಕ ಕಲ್ಯಾಣಾರ್ಥವಾಗಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ) ತನ್ನ 27ನೇ ಸಾಮೂಹಿಕ ಸತ್ಯನಾರಾಯಣ ಪೂಜೆಯ ಕೈಂಕರ್ಯವನ್ನು ಬಹಳ ಅದ್ದೂರಿಯಾಗಿ ಬ್ರಾಹ್ಮಿ ಸಭಾಭವನದಲ್ಲಿ ಋತ್ವಿಜರಾದ ಶ್ರೀ ರಮೇಶ್ ಮೂಡುಬೆಟ್ಟು ಇವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ಗಳ ಮೂಲಕ ಸಮೂಹವನ್ನು ಭಕ್ತಿ ಪರವಶ ಗೊಳಿಸಿದರು. ಸಮಾಜ ಬಾಂಧವರೆಲ್ಲ ಅತ್ಯಂತ ಸಂಭ್ರಮದಿಂದ ಭಾಗವಹಿಸಿದರು. ತರಂಗಿಣಿ ಮಿತ್ರ ಬಳಗ ಪಡುಬಿದ್ರೆ ಯವರ ಸುಂದರ ಪುಷ್ಪ ಮಂಟಪ, ರಾಜೇಶ್ ಪಣಿಯಾಡಿಯವರ ಪುಷ್ಪ ರಂಗವಲ್ಲಿ ಎಲ್ಲರನ್ನೂ ಆಕರ್ಷಿಸಿತ್ತು. ಚಂಡೆ ವಾದನ, ವಾಲಗ, ಮಂಗಲ ವಾದ್ಯ, ವಿಪ್ರ ಮಹಿಳೆಯರಿಂದ ಭಜನೆ, ವಿಪ್ರ ಮಹನೀಯರಿಂದ ವಿಷ್ಣು ಸಹಸ್ರನಾಮ ಪಾರಾಯಣ ಇತ್ಯಾದಿಗಳು ಮಹಾಪೂಜೆಗೆ ಬಹಳಷ್ಟು ಮೆರುಗು ನೀಡಿದವು. ಪೂಜಾ ಕಲಶಗಳನ್ನು ಏಲಂನಲ್ಲಿ ಪೂರ್ವಾಧ್ಯಕ್ಷರಾದ ಶ್ರೀ ನಾಗರಾಜ ತಂತ್ರಿ ಹಾಗೂ ಶ್ರೀ ರಂಜನ್ ಕಲ್ಕೂರ್ ರವರು ತಮ್ಮದಾಗಿಸಿಕೊಂಡರು. ಕೊನೆಯಲ್ಲಿ ಋತ್ವಿಜರಾದ ಶ್ರೀ ರಮೇಶ ಭಟ್ ರವರು ಪೂಜೆಯ ಪೂರ್ಣಪ್ರಸಾದವನ್ನು ಅಧ್ಯಕ್ಷರಾದ ಚಂದ್ರಕಾಂತ ಕೆ.ಎನ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ಹಾಗೂ ಕೋಶಾಧಿಕಾರಿ ಕುಮಾರಸ್ವಾಮಿ ಉಡುಪರ ಕೈಗೆ ಇತ್ತು ಯುವ ಬ್ರಾಹ್ಮಣ ಪರಿಷತ್ತಿನ ಸಮಾಜಮುಖಿ ಸೇವೆ ಮತ್ತು ಸರ್ವತೋಮುಖ ಬೆಳವಣಿಗೆಗಾಗಿ ಶ್ರೀ ದೇವರಲ್ಲಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಪ್ರಸ್ತುತ ಅಧ್ಯಕ್ಷ ಸಂದೀಪ್ ಮಂಜ ದಂಪತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಂದ ಎಲ್ಲ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯ ಬಹು ಪಾಲನ್ನು ನಿರಂತರವಾಗಿ ಪೂರ್ವ ಅಧ್ಯಕ್ಷರಾದ ಕೆ ಎಮ್ ಉಡುಪರವರು ನಿರ್ವಹಿಸುತ್ತಿರುವುದು ಸಮಾಜಕ್ಕೆ ಒಂದು ದೊಡ್ಡ ಕೊಡುಗೆ ಎನ್ನುವುದು ಹೆಮ್ಮೆಯ ವಿಷಯ. ಅಲ್ಲದೆ ಪರಿಷತ್ತಿನ ಎಲ್ಲ ಸದಸ್ಯರು ಮುತುವರ್ಜಿಯಿಂದ ಪೂಜೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂಸ್ಥೆಯ ಏಳಿಗೆಯ ಭದ್ರ ಬುನಾದಿ ಎಂದು ಅಧ್ಯಕ್ಷ ಚಂದ್ರಕಾಂತ್ ಕೆ ಎನ್ ಹೇಳುತ್ತಾ ಕೊನೆಯಲ್ಲಿ ಬಂದವರೆಲ್ಲರಿಗೂ ಪೂರ್ವಾದ್ಯಕ್ಷ ಶ್ರೀ ಚೈತನ್ಯ M G ವಂದನೆಯನ್ನು ಸಲ್ಲಿಸಿದರು.