ಉಡುಪಿ ನಗರದ ಬೈಲೂರು ನಿವಾಸಿ ಅಜಿತ್ ರಾವ್ (43ವ.) ಜ . 22 ಸಂಜೆ ಹೃದಯಾಘಾತ ದಿಂದ ನಿಧನರಾದರು. ಮೃತರು ಪತ್ನಿ , ಓರ್ವ ಪುತ್ರನನ್ನು ಅಗಲಿದ್ದಾರೆ.
ಶಾರದ ಕಲ್ಯಾಣ ಮಂಟಪದ ಮೆನೇಜರ್ ಆಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿ ದ್ದರು. ಕ್ಯಾಟರಿಂಗ್ ಸರ್ವಿಸ್ , ಸ್ಥಾನಿಕ ಬ್ರಾಹ್ಮಣ ಸಂಘ ಉಡುಪಿ ಇದರ ಸಕ್ರಿಯ ಸದಸ್ಯ ರಾಗಿ ಸೇವೆ ನೀಡುತ್ತಿದ್ದರು.
ಇವರ ನಿಧನಕ್ಕೆ ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್ , ನಗರ ಸಭೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ , ಉಪಾಧ್ಯಕ್ಷೆ ರಜನಿ ಮಂಜುನಾಥ್ ಹೆಬ್ಬಾರ್, ಸ್ಥಾನಿಕ ಬ್ರಾಹ್ಮಣ ಸಂಘ ಉಡುಪಿ ಇದರ ಅಧ್ಯಕ್ಷ-ಸಿಎ ಗಣೇಶ್ ಹೆಬ್ಬಾರ್ ಸಂತಾಪ ಸೂಚಿಸಿದ್ದಾರೆ.