Header Ads Widget

ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮ

ಯುವಬಂಟರ ಸಂಘ (ರಿ.) ಕಂಬಳಕಟ್ಟ -ಕೊಡವೂರು , ಜೆಎಸ್ ಡಬ್ಲ್ಯೂ ಫೌಂಡೇಶನ್ ಮಂಗಳೂರು, ಲಯನ್ಸ್ ಕ್ಲಬ್ ಉಡುಪಿ-ಚೇತನ ಇವರುಗಳ ಆಶ್ರಯದಲ್ಲಿ ಇಂಡಿಯಾ ವಿಷನ್ ಇನ್ಸ್ಟಿಟ್ಯೂಟ್ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ  ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮವು ದಿನಾಂಕ:12.01.2025 ಭಾನುವಾರ ಆದಿವುಡುಪಿ ಶಾಲೆಯಲ್ಲಿ ಜರುಗಿತು.*


*ದೀಪಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ನಗರಸಭೆ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ ಮಾತಾನಾಡಿ ನಾವು ಸಮಾಜಕ್ಕೆ ನಮ್ಮಿಂದಾದ ಕಿಂಚಿತ್ ಕೊಡುಗೆ ನೀಡುವುದು ಮಾನವ ಧರ್ಮ.ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಆಯೋಜಕರಿಗೆ ಅಭಿನಂದನೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿರಲಿ ಎಂದು ಶುಭಹಾರೈಸಿದರು.*


*ಈ ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ ಹಾಗೂ ಸಮಾಜ ಸೇವಕ ಆದಿವುಡುಪಿ ಗೌರವ್ ಹೇರ್  ಸಲೂನ್ ನ ಶ್ರೀ ಸತೀಶ್ ಸುವರ್ಣ ಇವರುಗಳನ್ನು ಸರ್ವಗಣ್ಯರ ಸಮ್ಮುಖದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಸುಮಾರು 200 ಕ್ಕೂ ಅಧಿಕ ಶಿಭಿರಾರ್ಥಿಗಳು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಗಳಿಗೆ ಉಚಿತ ವಾಗಿ ಕನ್ನಡಕ ವಿತರಿಸಲಾಯಿತು.*


*ಯುವಬಂಟರ ಸಂಘ(ರಿ.) ಕಂಬಳಕಟ್ಟ -ಕೊಡವೂರು ಇದರ ಅಧ್ಯಕ್ಷರಾದ ಶ್ರೀ ಕೆ.ಶಿವಪ್ರಸಾದ್ ಶೆಟ್ಟಿ ಮಜಲುಮನೆ ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ  ಜೆ ಎಸ್ ಡಬ್ಲ್ಯೂ ಮಂಗಳೂರು ಇದರ ಕಂಟೈನರ್ ಮತ್ತು ಕೋಲ್ ಟರ್ಮಿನಲ್ ವಿಭಾಗದ ಉಪಾಧ್ಯಕ್ಷರಾದ ಶ್ರೀ ಎಲ್.ರಾಮನಾಥನ್,   ಜನರಲ್ ಮ್ಯಾನೇಜರ್ ವ್ಯಾಪಾರ ಮತ್ತು ಅಭಿವೃದ್ಧಿ ಕಂಟೈನರ್ ವಿಭಾಗದ  ಶ್ರೀ ದಿಲೀಪ್ ಶೆಟ್ಟಿ ,ಸಿ.ಎಸ್.ಆರ್ ಮ್ಯಾನೇಜರ್  ಶ್ರೀ ಪ್ರದೀಪ್ ಕೆ.ಆರ್,  ಲಯನ್ಸ್ ಕ್ಲಬ್ ಜಿಲ್ಲೆ317 ಸಿ ನ ವಿಷನ್ ಕೇರ್  ಉಡುಪಿ ಜಿಲ್ಲಾ ಕ್ಯಾಬಿನೆಟ್ ಸದಸ್ಯರಾದ ಲಯನ್ ದಿನಕರ ಶೆಟ್ಟಿ .ಎಂ, ಯುವಉದ್ಯಮಿ ಪ್ರವೀಣ್ ಶೆಟ್ಟಿ ಅಂಬಲಪಾಡಿ ,ಆದಿವುಡುಪಿ ಶಾಲಾ ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಕೆ.ಭಾಸ್ಕರ ಶೆಟ್ಟಿ ,ಇಂಡಿಯಾ ವಿಷನ್ ಸಂಸ್ಥೆಯ  ವೈದ್ಯೆ ಡಾl ಜಾನೆಟ್,ಲಯನ್ಸ್ ಕ್ಲಬ್ ಉಡುಪಿ-ಚೇತನ ಇದರ ಅಧ್ಯಕ್ಷರಾದ ಶ್ರೀ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.*


*ಯುವಬಂಟರ ಸಂಘ ಕಂಬಳಕಟ್ಟ -ಕೊಡವೂರು ಇದರ ಅಧ್ಯಕ್ಷ ಶ್ರೀ  ಕೆ.ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಶ್ರೀ ಪುಷ್ಪರಾಜ್ ಶೆಟ್ಟಿ ಆದಿವುಡುಪಿ ವಂದಿಸಿದರು.ಗೌರವಾಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ ಕಂಬಳಕಟ್ಟ ಕಾರ್ಯಕ್ರಮ ನಿರೂಪಿಸಿದರು.*