ಆರ್ಟ್ ಆಫ್ ಲಿವಿಂಗ್ ಸಂಸ್ಥೆ ,ಉಡುಪಿ ಇವರ ವತಿಯಿಂದ ರಕ್ತದಾನ ಶಿಬಿರವನ್ನು ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು.
ಕಾಪು ತಾಲೂಕಿನ ತಹಶಿಲ್ದಾರ್ ಡಾ. ಪ್ರತಿಭಾ ಆರ್, ಉಡುಪಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಎಚ್. ಅಶೋಕ್ ಹಾಗೂ ರಕ್ತ ನಿಧಿ ವಿಭಾಗದ ಮುಖ್ಯಸ್ತೆವೀಣಾ ಅವರು ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಪ್ರತಿಭಾ ಅವರು ಮಾತನಾಡಿ ಇವತ್ತಿನ ದಿನಗಳಲ್ಲಿ ರಕ್ತದಾನದ ಅವಶ್ಯಕತೆ ಮತ್ತು ರಕ್ತದಾನ ಮಾಡು ವುದರಿಂದ ನಮ್ಮ ಶರೀರದಲ್ಲಿ ಆಗುವ ಲಾಭಗಳ ಬಗ್ಗೆ ವಿವರಿಸಿದರು. ಡಾ. ಅಶೋಕ್ ಅವರು ಶಿಬಿರ ವನ್ನು ಆಯೋಜಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕಿ ಸುನೀತ ನಾಯಕ್, ನಿರೂಪಿಸಿದರು. ಸಂಸ್ಥೆಯ ಉಡುಪಿ ಜಿಲ್ಲೆಯ ಶಿಕ್ಷಕರ ಸಂಯೋಜಕ ದಿನೇಶ್ ಕುಂದಾಪುರ, ಶಿಕ್ಷಕ ವೃಂದ, ಪದಾಧಿಕಾರಿಗಳಾದ ನಾಗೇಶ್ ಶೇರಿಗಾರ್, ನಾಗೇಶ್ ನಾಯಕ್, ಧನರಾಜ್ ಶೇರಿಗಾರ್ ಹಾಗೂ ಸಾಧಕರು ಉಪಸ್ಥಿತರಿದ್ದರು.
ಸಂಪರ್ಕ: ೯೫೩೫೬೧೯೩೫೩
ಸಂಪರ್ಕ: ೯೫೩೫೬೧೯೩೫೩