Header Ads Widget

​ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಚಿಣ್ಣರ ಬಣ್ಣದ ಹಬ್ಬ – ೨೦೨೫.

                                

ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಮತ್ತು ಅವರ ಪತ್ನಿ ಶ್ರೀಮತಿ ಸರಸ್ವತೀ ಜಿ. ರಾವ್ ತಮ್ಮ ಮಗಳು ಪಾವನಿಯ ಹತ್ತನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಉಡುಪಿ ಜಿಲ್ಲೆಯ ೧ ರಿಂದ ೯ನೇ ತರಗತಿ ವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ೧೨.೦೧.೨೦೨೫ ಭಾನುವಾರ ಜರಗಿತು. 


ಸುಮಾರು ೩೦೦ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ತರಗತಿವಾರು ಪ್ರಥಮ (೨೦೦೦) ದ್ವಿತೀಯ (೧೫೦೦), ತೃತೀಯ (೧೦೦೦) ಮತ್ತು ಎರಡು ಸಮಾಧಾನಕರ (ತಲಾ ೫೦೦) ಸೇರಿದಂತೆ ಒಟ್ಟು ೪೫ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪುಸ್ತಕ ಸ್ಮರಣಿಕೆಯನ್ನು ನೀಡಲಾಯಿತು. 


ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಜೆ. ಎನ್. ಭಟ್ ಮತ್ತು ಡಾ. ವಿರೂಪಾಕ್ಷ ದೇವರಮನೆ ವಿದ್ಯಾರ್ಥಿ ಪೋಷಕರಿಗೆ ಆರೋಗ್ಯದ ಮತ್ತು ಮಕ್ಕಳನ್ನು ಬೆಳೆಸುವ ಕುರಿತು ಉಪಯುಕ್ತ ಸಲಹೆ ನೀಡಿದರು. ರಮೇಶ್ ರಾವ್, ಎಚ್. ಜನಾರ್ದನ್ ರಾವ್, ನಟರಾಜ ಉಪಾಧ್ಯ, ಗಾಯತ್ರಿ ನಾಯಕ್ ಸ್ಪರ್ಧೆಯ ನಿರ್ಣಾಯಕರಾಗಿ ಸಹಕರಿಸಿದರು. 


ಸಮಾರೋಪ ಸಮಾರಂಭದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ ಟಿ. ಶ್ರೀಧರ್ ರಾವ್ ಮತ್ತು ಅವರ ಪತ್ನಿ ಶ್ರೀಮತಿ ಕುಸುಮ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಕೆ. ಬಾಲಕೃಷ್ಣ ರಾವ್, ಗೋಪಿಕೃಷ್ಣ ರಾವ್, ಯು. ಎಸ್. ರಾಜಗೋಪಾಲ ಆಚಾರ್ಯ, ಶ್ರೀಮತಿ ಬಿ. ಜಿ. ಶಶಿರೇಖಾ, ಶ್ರೀಮತಿ ಹೆಲೆನ್ ಸಾಲಿನ್ಸ್ ಉಪಸ್ಥಿತರಿದ್ದರು. 


ಯಕ್ಷಗಾನ ಕಲಾರಂಗದ ಕಾರ್ಯಕರ್ತರು ಮತ್ತು ವಿದ್ಯಾಪೋಷಕ್ ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜಿಸುವಲ್ಲಿ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.​