Header Ads Widget

ಆಚಾರ್ಯಾಸ್ ಏಸ್:ಹತ್ತನೇ ತರಗತಿ ಪಿಯುಸಿ ಸಿಯಿಟಿ ಟಾಪರ್ಸ್ ಗೆ ಎನ್.ವಿ.ಆಚಾರ್ಯ ಪುರಸ್ಕಾರ.

ಒಂಬತ್ತು, ಹತ್ತು, ಪಿಯುಸಿ, ಸಿಯಿಟಿ, ಜೆಯಿಯಿ, ನೀಟ್ ಹಾಗೂ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡಿ ಗರಿಷ್ಠ ಫಲಿತಾಂಶ ಪಡೆಯುತ್ತಿರುವ ಉಡುಪಿಯ ಪ್ರಸಿದ್ಧ ತರಬೇತಿ ಸಂಸ್ಥೆ ಆಚಾರ್ಯಾಸ್ ಏಸ್ ಸಂಸ್ಥೆಯಲ್ಲಿ ಗರಿಷ್ಠ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಈ ಭಾರಿ ಎನ್.ವಿ.ಆಚಾರ್ಯ ಪುರಸ್ಕಾರ ಲಭಿಸಲಿದೆ.


ಹತ್ತನೇತರಗತಿ,ಪಿಯುಸಿ ಹಾಗೂ ಕರ್ನಾಟಕ ಸಿಯಿಟಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸುವ ವಿದ್ಯಾರ್ಥಿ ಗಳಿಗೆ ನಾವೂರು ವೆಂಕಟರಾಜ ಆಚಾರ್ಯ ಸ್ಮರಣಾರ್ಥ ಅವರ ಮಕ್ಕಳಿಂದ ಪಾರಿತೋಷಕ, ಪ್ರಮಾಣ ಪತ್ರ,ನಗದುಸಹಿತ ಎನ್.ವಿ.ಆಚಾರ್ಯ ಪುರಸ್ಕಾರವು ಲಭಿಸಲಿದೆ.


ಸಿಇಟಿಯಲ್ಲಿ ಅತ್ಯುತ್ತಮ ಶ್ರೇಯಾಂಕ ಗಳಿಸುವ ವಿದ್ಯಾರ್ಥಿಗೆ ಹತ್ತು ಸಾವಿರ ನಗದು ಬಹುಮಾನ. ದ್ವಿತೀಯ ಸ್ಥಾನ ಗಳಿಸುವ ವಿದ್ಯಾರ್ಥಿಗೆ ಐದು ಸಾವಿರ.ಅಂತೆಯೇ ಎಸ್.ಎಸ್.ಎಲ್.ಸಿ ಯಲ್ಲಿ ಗರಿಷ್ಠ ಅಂಕ ಪಡೆಯುವವರಿಗೆ ಐದು ಸಾವಿರ.ದ್ವಿತೀಯ ಸ್ಥಾನ ಎರಡೂವರೆ ಸಾವಿರ ನಗದು ಬಹುಮಾನ ಸಹಿತ ಪಾರಿತೋಷಕಗಳನ್ನು  ನೀಡಲಾಗುವುದು.


ಈಗಾಗಲೇ ಒಂಬತ್ತು,ಹತ್ತನೇ ತರಗತಿ ಪಿಯುಸಿ ಸಿಇಟಿ ತರಗತಿಗಳಿಗೆ ಪ್ರಸಿದ್ಧ ಉಪನ್ಯಾಸಕರಿಂದ ಉತ್ಕೃಷ್ಟ ಮಟ್ಟದ ತರಬೇತಿ ಆಯೋಜನೆ ಗೊಂಡಿದ್ದು ಸಿಇಟಿ ನೀಟ್ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯು ಮಾರ್ಚ 19 ರಂದು ಮುಗಿಯಲಿದೆ. ಮಾರ್ಚ 21ರಿಂದ ಎಪ್ರಿಲ್ 15 ನೇ ತಾರೀಖಿನವರೆಗೆ ಸಿಯಿಟಿ ಹಾಗೂ ನೀಟ್ ತರಬೇತಿಯು ನಿರಂತರ 26 ದಿನಗಳ ಕಾಲ ಜರಗಲಿದೆ. ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ತರಬೇತಿಯು ಸಾಗಲಿದೆ.


ಸಿಯಿಟಿ ಹಾಗೂ ನೀಟ್ ತರಬೇತಿಯ ಜೊತೆಗೆ ಮಾಹೆ ಪ್ರವೇಶಪರೀಕ್ಷೆ,ನಿಟ್ಟೆಯ ಇಂಜಿನಿಯರಿಂಗ್ ಕಾಲೇಜುಗಳು ಆಯೋಜಿಸುವ ನುಕ್ಯಾಟ್ ಪ್ರವೇಶಪರೀಕ್ಷೆಗೂ ತರಬೇತಿಯನ್ನು ಆಯೋಜಿಸಲಾಗುತ್ತಿದೆ.


ಫ್ಯಿಸಿಕ್ಸ್ ಕೆಮಿಸ್ಟ್ರಿ,ಮಾಥ್ಸ್ ಹಾಗೂ ಬಯೋಲಾಜಿಯಲ್ಲಿ ಪ್ರಸಿದ್ಧಿ ಪಡೆದಿರುವ ಪ್ರತಿಭಾನ್ವಿತ ಪ್ರಾಧ್ಯಾಪ ಕರ ತಂಡವು ವಿಜ್ಞಾನ ವಿಭಾಗದ ಪರಿಷ್ಕೃತ ಮಾಹಿತಿಗಳೊಂದಿಗೆ ತರಬೇತಿಯನ್ನು ನೀಡಲಿದೆ.


ತರಬೇತಿಯ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಅತೀನಿರೀಕ್ಷಿತ ಪ್ರಶ್ನೋತ್ತರ ಪತ್ರಿಕೆಗಳೊಂದಿಗೆ ತರಗತಿಗಳು ಜರಗಲಿದ್ದು ಮಾದರಿಪರೀಕ್ಷೆ ಹಾಗೂ ಪ್ರಸಿದ್ಧ ಪ್ರಕಾಶಕರುಗಳ ಕೃತಿಗಳು ಆಚಾರ್ಯಾಸ್ ಏಸ್ ಸಂಸ್ಥೆಯ ಗ್ರಂಥಾಲಯದಲ್ಲಿ ಲಭಿಸಲಿದೆ.


ಕಳೆದ ಒಂಬತ್ತು ವರ್ಷಗಳಲ್ಲಿ ಆಚಾರ್ಯಾಸ್ ಏಸ್ ಸಂಸ್ಥೆಯು ಆಯೋಜಿಸಿದ ಸಿಯಿಟಿ,ನೀಟ್ ಕ್ರಾಶಕೋರ್ಸ್ ನಲ್ಲಿ ತರಬೇತಿ ಪಡೆದ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪ್ರಸಿದ್ಧ ಮೆಡಿಕಲ್,ಪಾರಾ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಧ್ಯಯನಕ್ಕೆ ಆಯ್ಕೆಯಾಗಿ ದ್ದಾರೆ.ನೂರಾರು ವಿದ್ಯಾರ್ಥಿ,ವಿದ್ಯಾರ್ಥಿನಿಯರು ವೈದ್ಯರಾಗಿ, ಇಂಜಿನೀಯರಾಗಿ ದೇಶದ ವಿವಿದೆಡೆ ಸುಮಾರು 10ವಿದ್ಯಾರ್ಥಿಗಳು ವಿದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಒಂಬತ್ತು,ಹಾಗೂ ಹತ್ತನೇತರಗತಿಯ ಸಿ.ಬಿ.ಎಸ.ಯಿ,ಸ್ಟೇಟ್ ಹಾಗೂ ಐ.ಸಿ.ಯಸ.ಯಿ ವೆಕೇಶನ್ ಬಾಚ್ ಪ್ರತ್ಯೇಕವಾಗಿ ಜರಗಲಿದ್ದು ಮಾರ್ಚ ಕೊನೆಯ ವಾರದಲ್ಲಿ ತರಗತಿಗಳು ಆರಂಭವಾಗಲಿದೆ. ಪಿಯುಸಿ ವೆಕೇಶನ್ ಬಾಚ್  ಮಾರ್ಚ ಮೂರನೇ ವಾರದಿಂದ ಆರಂಭವಾಗಲಿದೆ. ಈಗಾಗಲೇ ನೋಂದಣಿಯೂ ಆರಂಭವಾಗಿದೆ.


ಆಸಕ್ತರು ಈ ಕೂಡಲೇ ಉಡುಪಿ ತೆಂಕಪೇಟೆ, ಶ್ರೀವೆಂಕಟ್ರಮಣ ದೇವಾಲಯದ ಮುಂಭಾಗದ ರಾಧೇ ಶ್ಯಾಂ ಕಟ್ಟಡದ ಮಹಡಿಯಲ್ಲಿರುವ ಏಸ್ ಕಚೇರಿಯನ್ನು ಸಂಪರ್ಕಿಸಬೇಕೆಂದು ಏಸ್ ಸಂಸ್ಥೆಯ ನಿರ್ದೇಶಕ ಪಿ.ಅಕ್ಷೋಭ್ಯ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕ :  9901420714.or  08204299111.