ಸ.ಮಾ.ಹಿ.ಪ್ರಾ ಶಾಲಾ ಹಳೆವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘ(ರಿ) ಕೊಡವೂರು ಇದರ 60 ನೇ ವಾರ್ಷಿಕ ಕ್ರೀಡಾಕೂಟವು ಜ.19 ರಂದು ಆದಿತ್ಯವಾರದಂದು ಕೊಡವೂರು ಶಾಲಾ ಮೈದಾನದಲ್ಲಿ ಜರುಗಲಿದೆ.
ಅಂದು ಬೆಳಿಗ್ಗೆ ಗಂಟೆ 9.00ಕ್ಕೆ ಸ್ಥಳೀಯ ದೇವಳದ ಮುಂಭಾಗದಿಂದ ಶಾಲಾ ಮೈದಾನದ ವರೆಗೆ ಕ್ರೀಡಾ ಜ್ಯೋತಿಯ ಮೆರವಣಿಗೆ ನಡೆಯಲಿದೆ.
ತದನಂತರ ಉಡುಪಿಯ ಸ್ಮರಣಿಕ ಸಮೂಹ ಸಂಸ್ಥೆಗಳ ಮಾಲಕ ದಿವಾಕರ್ ಸನಿಲ್ ಕ್ರೀಡಾ ಕೂಟ ಕ್ಕೆ ಚಾಲನೆ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ನ ನಿವೃತ್ತ ಅಧಿಕಾರಿ ರಮೇಶ್ ಶೆಟ್ಟಿ ಮೂಡುಬೆಟ್ಟು, ಉದ್ಯಮಿ ಹರೀಶ್ ಶ್ರೀಯಾನ್ ಕೊಡವೂರು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 9.30 ರಿಂದ ಪುರುಷರ ಕ್ರೀಡಾ ಸ್ಪರ್ಧೆಗಳು ಮಧ್ಯಾಹ್ನ ಗಂಟೆ 2.00 ರಿಂದ ಮಹಿಳೆಯರ ಕ್ರೀಡಾ ಸ್ಪರ್ಧೆಗಳು ನಡೆಯಲಿರುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.