ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರನಾಯಕ್, ಸೆನ್ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಪವನ್ ನಾಯಕ್, ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ಪ್ರವೀಣ್, ರಾಜೇಶ್ , ದಿಕ್ಷೀತ್, ನಿಲೇಶ್, ಮಾಯಪ್ಪ ಗಡದೆ ಮತ್ತು ಸುದೀಪ್ ರವರ ತಂಡ ಕುಂದಾಪುರ ತಾಲೂಕು ಮರವಂತೆ ಗ್ರಾಮದ ಮರವಂತೆ ಬೀಚ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಕಾರಿನಲ್ಲಿ ನಿಷೇದಿತ ಮಾದಕ ವಸ್ತು MDMA ಪೌಡರ್‌ನ್ನು
ಮಾರಾಟ ಮಾಡಲು ಹೊಂದಿದ್ದ ಆರೋಪಿ ಗಳಾದ 1.ಅಬ್ರಾರ್ ಶೇಖ್ (22), ತಂದೆ: ಮೊಹೀದ್ದೀನ್ ಶೇಖ್, ಹೆಬ್ಬಲೆ, ಭಟ್ಕಳ, ಉತ್ತರ ಕನ್ನಡ ಜಿಲ್ಲೆ, 2. ಮೊಹಮ್ಮದ್ ಇಸ್ಮಾಯಿಲ್ ಫರ್ಹಾನ್(25), ತಂದೆ: ಮೊಹಮ್ಮದ್ ಇರ್ಷಾದ್, ಭಟ್ಕಳ, ಉತ್ತರಕನ್ನಡ ಜಿಲ್ಲೆ, 3. ಮೊಹಮ್ಮದ್ ಜಿಯಾಮ್ ಬೆಳ್ಳಿ (26), ತಂದೆ: ಸಿರಾಜ್, ಭಟ್ಕಳ, ಉತ್ತರಕನ್ನಡ ಜಿಲ್ಲೆ, 4. ನೌಮನ್(27), ತಂದೆ: ಕೆ.ಮೌಲ, ಭಟ್ಕಳ, ಉತ್ತರಕನ್ನಡ ಜಿಲ್ಲೆ, 5. ಸಜ್ಜಾದ್ ಮುಸ್ತಕೀಮ್ ಕೆವಾಕ(21), ತಂದೆ: ಮುಸ್ತಕೀಮ್ ಕೆವಾಕ, ಕಾಸರಕೋಡ್, ಹೊನ್ನಾ ವರ, ಉತ್ತರಕನ್ನಡ ಜಿಲ್ಲೆರವರನ್ನು ದಸ್ತಗಿರಿಗೊಳಿಸಿ.
ಅವರಿಂದ 1) MDMA -15 ಗ್ರಾಂ 59 ಮಿಲಿ ಗ್ರಾಂ ತೂಕ, ಮೌಲ್ಯ ರೂ, 78,000/-, 2) KA20MD7053 ನೇ ಕಾರು- ಮೌಲ್ಯ ರೂ, 11,28,000 /-, 3) 5 ಮೊಬೈಲ್ ಪೋನ್. ಅಂದಾಜು ಮೌಲ್ಯ ರೂ, 50,000/-. ಸ್ವಾಧೀನ ಪಡಿಸಿದ ಸೊತ್ತಿನ ಒಟ್ಟು ಮೌಲ್ಯ ರೂ, 12,56,000/-ನ್ನು ವಶಪಡಿಸಿಕೊಂಡು ಸೆನ್ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 03/2024 ಕಲಂ: 22(b) NDPS Act 1985 ರಂತೆ ಪ್ರಕರಣ ದಾಖಲಾಗಿರುತ್ತದೆ.