Header Ads Widget

ಟ್ಯಾಲೆಂಟ್ ಹಂಟ್~ ಕಾೆಂಪಿಟಿಷನ್ 2024-25)

ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರ ಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರ್ಕೂರ್. ಇಲ್ಲಿನ ಕಾಮರ್ಸ್ ಫೋರಮ್, ಆಂತರಿಕ ಗುಣಮಟ್ಟದ ಭರವಸೆ ಕೋಶ, ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಭಾಗಿತ್ವದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗವು ದಿನಾಂಕ 03-01-2025 ರಂದು ಕಾಲೇಜಿನ ಎ.ವಿ. ಸಭಾಂಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಟ್ಯಾಲೆಂಟ್ ಹಂಟ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.


 ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೊ . ಭಾಸ್ಕರ್ ಶೆಟ್ಟಿ ಸಲ್ವಾಡಿ ಅವರು ಕಾರ್ಯಕ್ರಮ ಕ್ಕೆ ಶುಭ ಹಾರೈಸಿ, ಅಂತರ್ ಕಾಲೇಜು ಮಟ್ಟದ ಸ್ಪರ್ಧೆಗಳು ಸ್ನಾತಕೋತ್ತರ ವಿದ್ಯಾರ್ಥಿಗಳ ಸರ್ವತೋ ಮುಖ ಬೆಳವಣಿಗೆಗೆ ಸಹಕಾರಿಯಾಗಿದ್ದು, ವಾಣಿಜಶಾಸ್ತ್ರ ವಿಭಾಗದಿಂದ ಆಯೋಜಿಸರುವಂಥ ವಿ.ವಿ ಮಟ್ಟದ ಅಣಕು ಸಂದರ್ಶನ ಮತ್ತು ತುಣುಕು ವಿಡಿಯೋ ಸ್ಪರ್ಧೆಯು ವಿದ್ಯಾರ್ಥಿಗಳ ಮತ್ತು ಕಾಲೇಜಿನ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.


ಕಾರ್ಯಕ್ರಮದ ಉದ್ಘಾಟಕರಾಗಿ ಕಾರ್ಕಳದ ಎಂ.ಪಿ.ಎಂ ಸರಕಾರಿ ಪ್ರಥಮದರ್ಜೆ ಕಾಲೇಜಿನ ಅರ್ಥ ಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕಿಯಾದ ಶ್ರೀಮತಿ. ಜಯಲಕ್ಷ್ಮಿರವರು ಭಾಗವಹಿಸಿದ್ದರು. ಕಾರ್ಯಕ್ರಮ ದ ಸಂಯೋಜಕರಾದ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧಾಪಕರಾದ ರಾಧಾಕೃಷ್ಣ ನಾಯಕ್ ರವರು ಪ್ರಾಸ್ತಾವಿಕ ಭಾಷಣದಲ್ಲಿ ಟ್ಯಾಲೆಂಟ್ ಹಂಟ್ ಕಾರ್ಯಕ್ರಮದ ಹಿನ್ನಲೆ ಮತ್ತು ಇದರ ಉದ್ದೇಶ ದ ಬಗ್ಗೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಿದರು.


ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕರು ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಾದ ಶೋಭಾ ರ್, ಸಹಾಯಕ ಪ್ರಾಧ್ಯಾಪಕರಾದ ಅನಿಲ್ ಕುಮಾರ್ ಕೆ ವೈ, ಸುಮ ಟಿ ಕೆ, ಡಾ. ಹೇಮಾ ಎಸ್ ಕೊಡದ್, ಡಾ. ಶ್ರೀದೇವಿ, ಡಾ. ಗಣೇಶ್ ಪ್ರಸಾದ್, ಮತ್ತು ಗ್ರಂಥಪಾಲಕ ಹರೀಶ್ ಸಿ.ಕೆ ಉಪಸ್ಥಿತ ರಿದ್ದರು. ಅಂತಿಮ ಎಂ.ಕಂ ನ ವಿದ್ಯಾರ್ಥಿನಿ ಸಂಜಲಿ ಬಿ ಸ್ವಾಗತಿಸಿದರು ಮತ್ತು ಜಿ ರಂಜಿತಾ ಕಾರ್ಯ ಕ್ರಮವನ್ನು ನಿರೂಪಿಸಿದರು.


ದಿ ಬೆಸ್ಟ್ ಟ್ಯಾಲೆಂಟ್ ಸ್ಪರ್ಧೆಯನ್ನು ಮಂಗಳೂರು ವಿ.ವಿ ಎಲ್ಲಾ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ

ಆಯೋಜಿಸಲಾಗಿತ್ತು. ಈ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗಕ್ಕೆ ಸಂಬಂಧ ಪಟ್ಟ ಸಂದರ್ಶನಕ್ಕೆ ತಯಾರಿ

ನಡೆಸುವಲ್ಲಿ ಮಾರ್ಗದರ್ಶನ ಕೊಡುವ ಮತ್ತು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಉದ್ದೇಶದಿಂದ

ಆಯೋಜಿಸಲಾಗಿತ್ತು. 12 ವಿವಿಧ ಕಾಲೇಜಿನ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಣಕು ಸಂದರ್ಶನ ಮತ್ತು


ತುಣುಕು ವಿಡಿಯೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ನಾತಕೋತ್ತರ ಬೆಸ್ಟ್ ಟ್ಯಾಲೆಂಟ್ ಅವಾರ್ಡ್ 2025ನ್ನು ಕಾರ್ಕಳದ

ಎಂ.ಪಿ.ಎಂ ಸರಕಾರಿ ಪ್ರಥಮದರ್ಜೆ ಕಾಲೇಜಿನ ಶರಣ್ಯ ನಾಯಕ್ ಪಡೆದುಕೊಂಡರು, ಅದೇ ಕಾಲೇಜಿನ ಶ್ರೇಯ ಶೆಟ್ಟಿ ಮೋಸ್ಟ

ಪ್ರಾಮಿಸಿಂಗ್ ಟ್ಯಾಲೆಂಟ್ ಅವಾರ್ಡನ್ನು ಮತ್ತು ಬಾರಕೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅನಂತ ಡಿ ಡೈನಾಮಿಕ್

ಪರ್ಫಾರ್ಮರ್ ಅವಾರ್ಡನ್ನು ಪಡೆದುಕೊಂಡರು. ಬೆಸ್ಟ್ ಶಾರ್ಟ್ ವಿಡಿಯೋ 2025 ಪ್ರಶಸ್ತಿಯನ್ನು ಎಂ.ಜಿ.ಎಂ ಕಾಲೇಜಿನ

ಯತಿರಾಜ್ ಮತ್ತು ತಂಡದವರು ಪಡೆದು ಕೊಂಡರು.

ಎಲ್ಲಾರ ಮೆಚ್ಚುಗೆಗೆ ಪಾತ್ರವಾದ ವಿ.ವಿ ಮಟ್ಟದ ಈ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ರೇಖಾ ಶೆಟ್ಟಿ, ಬೆಲ್ತಂಗಡಿ ಸರಕಾರಿ

ಪ್ರಥಮದರ್ಜೆ ಕಾಲೇಜಿನ ಡಾ. ಕುಶಾಲಪ್ಪ ಮತ್ತು ಎಂಪಿಎಂ ಕಾಲೇಜಿನ ಜಯಲಕ್ಷ್ಮಿ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಸಂಜೆ ನಡೆದಂತಹ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಅಂತಿಮ ವರ್ಷದ ಎಂ.ಕಂ ವಿದ್ಯಾರ್ಥಿ

ಅನಂತ್ ಡಿ ನಡೆಸಿಕೊಟ್ಟರು. ಭಾಗವಹಿಸಿದ ಎಲ್ಲಾ ವಿದ್ಯಾಥಿಗಳಿಗೆ ಊಟ ಹಾಗೂ ಉಪಹಾರದ ವ್ಯವಸ್ಥೆಯನ್ನು ಕಾಲೇಜಿನ

ಕಡೆಯಿಂದ ಮಾಡಲಾಗಿತ್ತು.