Header Ads Widget

ವಿಡ್ವಾರ್ಸ್ ಬಾಯ್ಸ್ ಮಂಗಳೂರು ತಂಡಕ್ಕೆ ಟ್ರೋಫಿ

ಇತ್ತೀಚೆಗೆ ದುಬೈಯ ಅಬು-ಹೈಲ್ ಮೈದಾನದಲ್ಲಿ ಜರಗಿದ ಯು.ಎ.ಇಯ ಪ್ರತಿಷ್ಠಿತ ನ್ಯೂ ಇಯರ್ ಕ್ರಿಕೆಟ್ ಪಂದ್ಯಾಕೂಟದಲ್ಲಿ ದುಬೈನ ವಿಡ್ವಾರ್ಸ್ ಬಾಯ್ಸ್ ಮಂಗಳೂರು ಕ್ರಿಕೆಟ್ ತಂಡವು ಚತುರ್ಥ ಸ್ಥಾನ ಪಡೆಯಿತು.

ಬಹುತೇಕ ಉಡುಪಿ ಮಂಗಳೂರು ಕುಂದಾಪುರದ ಆಟಗಾರರನ್ನೇ ಹೊಂದಿದ್ದ ವಿದ್ಯಾನಂದ ಶೆಟ್ಟಿ ಹಾಗೂ ಪ್ರವೀಣ್ ಶೆಟ್ಟಿ ಒಡೆತನದ ವಿಡ್ವಾರ್ಸ ಬಾಯ್ಸ್ ಮಂಗಳೂರು ತಂಡವು ತೀವ್ರ ಜಿದ್ದಾಜಿದ್ದಿನ ಹೋರಾಟದಲ್ಲಿ ಕೂದಲೆಳೆ ಅಂತರದಲ್ಲಿ ಫೈನಲ್ಸ್ ತಲುಪುವ ಅವಕಾಶದಿಂದ ವಂಚಿತವಾಗಿ ಚತುರ್ಥ ಸ್ಥಾನ ಪಡೆದು ಮಿನುಗುವ ಟ್ರೋಫಿ ಗಳಿಸಿ ಸಂಘಟಕರ ವಿಶೇಷ ಪ್ರಶಂಸೆಗೆ ಪಾತ್ರವಾಯಿತು.

ದುಬೈಯ ಪ್ರಸಿದ್ಧ ಹನ್ನೆರಡು ತಂಡಗಳಿಗೆ ಮಾತ್ರ ಈ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿತ್ತು.


ಕುoದಾಪುರ ಸಮೀಪದ ಸೂರಾಲಿನ ವಿಠಲ್ ರಿಶಾನ್ ನಾಯಕ್ ಅವರ ಅನುಭವೀ ಮಾರ್ಗದರ್ಶನದೊಂದಿಗೆ ಶಾಬುದಿನ್ ಯೆರ್ಮಾಳ್ ನಾಯಕತ್ವದಲ್ಲಿ ಅಂಕಿತ್ ಹಳೆಯಂಗಡಿ,ದೀಪಕ್ ಮಂಗಳೂರು,ರೋಹಿತ್ ಪುಟ್ಟ ಉಡುಪಿ,ಪ್ರಣೀತ ಬೈಕಂಪಾಡಿ, ನಿಕೇತನ ಪೆರ್ಡೂರು,ಆಕಾಶ್ ಮಲ್ಪೆ,ವರುಣ್ ಉಡುಪಿ, ಪುನೀತ್ ಉಡುಪಿ, ಆಟಗಾರರೊಂದಿಗೆ ಕಣಕ್ಕೆ ಇಳಿದಿತ್ತು.ಸೆಮಿಫೈನಲನಲ್ಲಿ ವಿಡ್ವಾರ್ಸ್ ಬಾಯ್ಸ್ ತಂಡದ ಭರ್ಜರಿ ಪ್ರದರ್ಶನವು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ಇರಿಸಿತ್ತು.

ಬಹುಮಾನ ಸಮಾರಂಭದಲ್ಲಿ ದುಬೈನ ಪ್ರಸಿದ್ಧ ಉದ್ಯಮಿಗಳು ಹಾಗೂ ಈ ಪಂದ್ಯಾಟದ ಆಯೋಜಕರಾದ ಶೈಖ್ ಕಾಪಿಕಾಡ್,ಅಖಿಲ್ ಉಡುಪಿ, ತೈದ್ ಉಡುಪಿ ಹಾಗೂ ಕರಾವಳಿ ಮೂಲದ ಉದಯಶೆಟ್ಟಿ ರೇಂಜರ್ಸ್ ಪಾಲ್ಗೊಂಡಿದ್ದರು.