ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿ ಗ್ರಾಮದಲ್ಲಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ: 21-01-2025 ರಂದು ಬೆಳಿಗ್ಗೆ 10:15 ಗಂಟೆಯಿಂದ 11:30 ಗಂಟೆಯ ಮದ್ಯಾವ ದಿಯಲ್ಲಿ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಬೀಚ್ ಬಳಿ ಇರುವ ಪಿರ್ಯಾದಿ ಉದಯ ಪೂಜಾರಿರವರ ಮನೆಯ ಮೇಜಿನ ಮೇಲೆ ಇಟ್ಟಿದ್ದ ಬ್ಯಾಗ್‌ನ ಜೀಪ್ ತೆಗೆದು ಬ್ಯಾಗ್ ನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ನೆಕ್ಲೇಸ್-1, 16 ಗ್ರಾಂ ತೂಕದ ಬಳೆ-1 ಹಾಗೂ 3 ಗ್ರಾಂ ತೂಕದ 3 ಚಿನ್ನದ ಉಂಗುರ ವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಚಿನ್ನದ ಒಟ್ಟೂ ಮೌಲ್ಯ 2,00,000/ ರೂಪಾಯಿ ಆಗಿರುತ್ತದೆ. ಈ ಬಗ್ಗೆ ಗಂಗೋಳ್ಳಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 12/2025 ಕಲಂ. 305 ಬಿಎನ್‌ಎಸ್‌ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಠಾಣಾ ಪಿ.ಎಸ್.ಐ ಹರೀಶ್ ಆರ್ ಹಾಗೂ ಸಿಬ್ಬಂದಿಗಳಾದ ಶಾಂತರಾಮ, ರಾಜು, ನಾಗರಾಜ, ರಾಘವೇಂದ್ರ, ಸಂದೀಪ ಕುರಣಿ, ಮಾರುತಿ ನಾಯ್ಕ ಹಾಗೂ ದಿನೇಶ್ ರವರು ಮನೆ ಕಳ್ಳತನದ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ, ದಿನಾಂಕ 21.01.2025 ರಂದು ರಾತ್ರಿ 20.00 ಗಂಟೆಗೆ ಪ್ರಕರಣದ ಆರೋಪಿಯಾದ ವಿನಾಯಕ(41), ತಂದೆ: ನರಸಿಂಹ, ಗುಜ್ಜಾಡಿ, ಕುಂದಾಪುರ
ಪ್ರಮೀಳಾ(30), ಗಂಡ: ವಿನಾಯಕ, ಗುಜ್ಜಾಡಿ, ಕುಂದಾಪುರ ಎಂಬುವರನ್ನು ವಶಕ್ಕೆ ಪಡೆದು, ಆರೋಪಿತರಿಂದ ಕಳುವಾದ 16 ಗ್ರಾಂ ತೂಕದ ಚಿನ್ನದ ನೆಕ್ಲೇಸ್-1, 16 ಗ್ರಾಂ ತೂಕದ ಬಳೆ-1, ಹಾಗೂ 3 ಗ್ರಾಂ ತೂಕದ 3 ಚಿನ್ನದ ಉಂಗುರ, ಇವುಗಳ ಒಟ್ಟುಮೌಲ್ಯ 2,00,000/- ರೂಪಾಯಿ ಹಾಗೂ ಆರೋಪಿಯು ಕೃತ್ಯಕ್ಕೆ ಬಳಸಿದ KA 20 EK 6304 ನಂಬ್ರದ ಟಿ.ವಿ.ಎಸ್ ಮೋಟಾರ್ ಸ್ಕೂಟಿಯನ್ನು ಸ್ವಾಧೀನ ಪಡಿಸಿಕೊಂಡು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.