Header Ads Widget

ಕಳೆದ 25 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಮಹಮದ್ ಹನೀಫ್ ಬಂಧನ

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ 1999ನೇ ಸಾಲಿನಲ್ಲಿ ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಕ್ರಮಾಂಕ 13/1999  ಕಲಂ 489(A)(B)(C) IPC ಪ್ರಕರಣದಲ್ಲಿ ಆರೊಪಿ ತನಾದ ಮಹಮದ್  ಹನೀಫ್ ತಂದೆ: ಬಿ ಅಬ್ದುಲ್ಲಾ, ಮುಂಬೈ , ಮಹಾರಾಷ್ಟ್ರ  ಇತನು ಜೈಲಿನಿಂದ ಬಿಡುಗಡೆ ಹೊಂದಿ ಸುಮಾರು  25 ವರ್ಷ ಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರಿಸಿ ಕೊಂಡಿದ್ದು, ಈ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯ LPC ವಾರಂಟ್ ಜಾರಿ ಮಾಡಿರುತ್ತದೆ. 


ದಿನಾಂಕ 28/01/2025 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯ ಪಿಎಸ್ಐ ನೂತನ್  ಡಿ ಮತ್ತು ಸಿಬ್ಬಂದಿಯವರಾದ ಹೆಚ್ ಸಿ ರಾಜು,  ಹೆಚ್ ಸಿ ಅಶೋಕ್ ಶೆಟ್ಟಿ  ರೊಂದಿಗೆ ಕೇರಳದ  ಕಾಸರ ಗೋಡುನಿಂದ ಪತ್ತೆ ಹಚ್ಚಿ ಮಾನ್ಯ ನ್ಯಾಯಲಯದ ಮುಂದೆ  ಹಾಜರು ಪಡಿಸಿರುತ್ತಾರೆ.