Header Ads Widget

ಗಾನ ನಾಟ್ಯೋತ್ಸವ~ ಶ್ರೀ ಸಾಯಿ ಸ್ವರಾಂಜಲಿ ವಿದ್ಯಾಲಯ (ರಿ.) ಹೊಸೂರು ಗ್ರಾಮ ಕರ್ಜೆ



ಉಡುಪಿ : ಶ್ರೀ ಸಾಯಿ ಸ್ವರಾಂಜಲಿ ವಿದ್ಯಾಲಯ (ರಿ) ಹೊಸೂರು ಗ್ರಾಮ ಕರ್ಜೆ ಇದರ ಚತುರ್ಥ ವರ್ಷದ ಗಾನ ನಾಟ್ಯೋತ್ಸವವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇದರ ಪ್ರಾಯೋಜ ಕತ್ವದಲ್ಲಿ ಶ್ರೀ ಶಾರದಾ ಭವನ ನೀಲಾವರದಲ್ಲಿ ದಿನಾಂಕ 12- 1 -2025 ರಂದು ಜರುಗಿತು.



ಕಮಲಾಕ್ಷಿ ಪ್ರಕಾಶ್ ಉಡುಪ, (ಪ್ರಾಂಶುಪಾಲರು, ಶ್ರೀ ಆನಂದತೀರ್ಥ ಪಿ ಯು ಕಾಲೇಜು, ಪಾಜಕ) ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಸಂಸ್ಥೆಯ ಅಧ್ಯಕ್ಷ  ಪ್ರಕಾಶ್ ಶಾನುಭೋಗ್ ಕರ್ಜೆ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು.  



ಮುಖ್ಯ ಅತಿಥಿಗಳಾಗಿ  ವೈ. ಲಕ್ಷ್ಮೀನಾರಾಯಣ ಮಧ್ಯಸ್ಥ ನೀಲಾವರ ( ಶ್ರೀ ವಿಶ್ವ ಯಕ್ಷ ನೃತ್ಯ ಕಲಾ ನಿಕೇತನ ಸಂಸ್ಥೆಯ ಅಧ್ಯಕ್ಷರು ),   ಗ್ಲಾಡ್ ಸನ್  ರವೀಂದ್ರ (ಲಿಟಲ್ ರಾಕ್  ಇಂಡಿಯನ್ ಸ್ಕೂಲಿನ ಸಂಗೀತ ಅಧ್ಯಾಪಕರು),   ಮುರಳೀಧರ ಭಟ್ (ಕಲಾವಿದರು, ಅರ್ಚಕರು, ಮುಂಡ್ಕಿನ ಜಡ್ಡು),  ಸತೀಶ್ ಶೆಟ್ಟಿ (ಮುಖ್ಯೋಪಾಧ್ಯಾಯರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಹೊಸೂರು ಕರ್ಜೆ) ಇವರು ಉಪಸ್ಥಿತರಿದ್ದರು.


ಸಂಗೀತ ವಿಶಾರದ ಡಾ. ಅಡೋಲ್ಫ್ ಶರ್ವಿನ್ ಅಮ್ಮಣ್ಣ  ಇವರಿಗೆ ಶ್ರೀ ಸಾಯಿ ಸ್ವರಾಂಜಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಸಂಸ್ಥೆಯ ನಿರ್ದೇಶಕಿ  ರಾಜರಾಜೇಶ್ವರಿ ಪಿ ಶಾನುಭೋಗ್ ಸ್ವಾಗತಿಸಿದರು. ಸರ್ವೇಶ್ ಎಳ್ಳಂಪಳ್ಳಿ ಧನ್ಯವಾದ ಸಮರ್ಪಿಸಿದರು.   ವೈ ಎಲ್ ವಿಶ್ವರೂಪ ಮಧ್ಯಸ್ಥ ನೀಲಾವರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.