ದಾವಣಗೆರೆಯಲ್ಲಿ ಪಿ ಎಸ್ ಎಸ್ ಸಮೂಹ ಸಂಸ್ಥೆ ನಡೆಸಿದ "ನೃತ್ಯ ವೈಭವ" ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರ (ರಿ.) ನೃತ್ಯ ಸಂಸ್ಥೆಯು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆಯುವುದರೊಂದಿಗೆ ₹ 75000/- ನಗದು ಬಹುಮಾನವನ್ನು ಪಡೆದುಕೊಂಡಿದೆ.
ಮಂಜರಿ ಚಂದ್ರ ಪುಷ್ಪರಾಜ್ ಇವರ ನೇತೃತ್ವದಲ್ಲಿ ಶಿಷ್ಯಂದಿರಾದ ಪನ್ನಗ, ಶ್ರೇಷ್ಠ, ಅನ್ವಿತಾ, ಧನ್ಯಶ್ರೀ, ಅನ್ನಪೂರ್ಣಿ, ವಿಭಾ, ಲಕ್ಷ್ಮಿ , ಸಾನ್ವಿ, ನಿಧಿ ಹಾಗು ಪ್ರಾಣವಿ ಇವರು ನರ್ತಿಸಿದ "ಕಾಳಿಂಗ ನರ್ತನ" ಎಂಬ ಪ್ರಸ್ತುತಿಗೆ ಪ್ರಥಮ ಸ್ಥಾನ ಬಂದಿರುತ್ತದೆ.