Header Ads Widget

ಸ್ವಚ್ಛತಾ ಅಭಿಯಾನದಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಮಹತ್ವಪೂರ್ಣ: ನಗರಸಭೆಯ ಅಧ್ಯಕ್ದ ಪ್ರಭಾಕರ್ ಪೂಜಾರಿ

ನಗರವನ್ನು ಸ್ವಚ್ಛವಾಗಿಡುವಲ್ಲಿ ಸ್ಥಳೀಯ ಸಾಮಾಜಿಕ ಸಂಸ್ಥೆಗಳ ಪಾತ್ರವು ಮಹತ್ವಪೂರ್ಣವಾಗಿದ್ದು ಉಡುಪಿ ನಗರಸಭೆಯು ಈ ಸಂಸ್ಥೆಗಳ ಸಾಮಾಜಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಉಡುಪಿ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿಯವರು ಹೇಳಿದರು. ಅವರು ಗುರುವಾರ ಈಶ್ವರ ನಗರ ರೆಸಿಡೆನ್ಸಿಯಲ್ ವೆಲ್ಫೇರ್ ಅಸೋಸಿಯೇಷನ್ ಸಂಸ್ಥೆ ಮತ್ತು ಉಡುಪಿ ನಗರಸಭೆಯ ಜಂಟಿ ಆಶ್ರಯದಲ್ಲಿ ಮಣಿಪಾಲದ ಈಶ್ವರ ನಗರದಲ್ಲಿ ಆಯೋಜಿಸಿದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷರಾದ ರಾಜವರ್ಮ ಅರಿಗ ಈ ಅಭಿಯಾನದ ನೇತೃತ್ವವನ್ನು ವಹಿಸಿದ್ದರು. ನಗರಸಭಾ ಸದಸ್ಯೆ ವಿಜಯಲಕ್ಷ್ಮಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ವಿನಾಯಕ್ ಶೆಣೈ, ಸಂಸ್ಥೆಯ ಪ್ರಮುಖರು, ಆರೋಗ್ಯ ನಿರೀಕ್ಷಕರಾದ ಪ್ರಕಾಶ್ ಪ್ರಭು, ಆರೋಗ್ಯ ಮೇಲ್ವಿಚಾರಕರಾದ ಸುರೇಶ್ ಕೇಲ್ಕರ್, ಯೋಗೀಶ್, ಮನೋಹರ್ ಮತ್ತಿತರರು ಹಾಜರಿದ್ದರು. ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಅಭಿಯಾನವನ್ನು ಸಂಘಟಿಸಿದರು.