Header Ads Widget

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಪು ಸ್ಥಳೀಯ ಸಂಸ್ಥೆ ಹಾಗೂ ಪೋಲಿಸ್ ಇಲಾಖೆಯ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ.

ಕಟ್ಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪೋಲಿಸ್ ಇಲಾಖೆ ಹಾಗೂ ಸ್ಕೌಟ್ಸ್ ಗೈಡ್ಸ್ ಕಾಪು ಸ್ಥಳೀಯ ಸಂಸ್ಥೆಯ ಜಂಟಿ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಜರುಗಿತು. ಸ್ಕೌಟ್ಸ್, ಗೈಡ್ಸ್, ಕಬ್, ಬುಲ್ ಬುಲ್ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗ ವಹಿಸಿದ್ದರು. ಸಭಾಧ್ಯಕ್ಷತೆಯನ್ನು ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿಯವರು ವಹಿಸಿದ್ದರು. 


ರಸ್ತೆ ಸುರಕ್ಷತಾ ಸಪ್ತಾಹವನ್ನು ಇಡೀ ರಾಜ್ಯದಲ್ಲಿ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ. ಆರ್. ಸಿಂಧ್ಯ ರವರ ಮಾರ್ಗದರ್ಶನದಲ್ಲಿ ಸಚಿವರು , ಶಾಸಕರು, ಪೋಲಿಸ್ ಇಲಾಖೆ, ಶಿಕ್ಷಣ ಇಲಾಖೆ ಮೊದಲಾದವರ ಸಹಕಾರದೊಂದಿಗೆ ಸಾಮಾಜಿಕ ಕಳಕಳಿಯ ಜವಾಬ್ದಾರಿಯನ್ನು ಹೊತ್ತು, ರಸ್ತೆ ನಿಯಮಗಳನ್ನು ಪ್ರತಿ ಯೊಬ್ಬರೂ ಪಾಲಿಸಬೇಕು. 


ಪ್ರತಿನಿತ್ಯ ಎಂಬಂತೆ ಅಪಘಾತಗಳು ಆಗುತ್ತದೆ.  ಇದಕ್ಕೆ ಕಾರಣ ಯಾರು? ಆರಕ್ಷಕ ಠಾಣೆಯ ಸಿಬ್ಬಂದಿ ಯವರು ಇಪ್ಪತ್ತನಾಲ್ಕು ಗಂಟೆಯೂ ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.


ಸಹಾಯಕ ನಿರೀಕ್ಷಣಾ ಅಧಿಕಾರಿಗಳಾದ ದಯಾನಂದ್ ರವರು 18 ವರ್ಷದ ಕೆಳಗಿನವರು ವಾಹನ ಚಾಲನೆ ಮಾಡಬಾರದು. ವಾಹನ ಚಲಾಯಿಸಿದ್ದಲ್ಲಿ ದಂಡ ವಿಧಿಸಲಾಗುವುದು. ಪ್ರತಿ ವರ್ಷ ಜನವರಿ ತಿಂಗಳಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಮಾಡಿ ಜನರಿಗೆ ತಿಳಿ ಹೇಳುತ್ತೇವೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಸಿದರು.


ಕಟ್ಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ  ಇನಾಯಿತುಲ್ಲಾರವರು  ಮಕ್ಕಳ ಹೆತ್ತವರಿಗೆ ಹೆಲ್ಮೆಟ್ ಹಾಗೂ ಸೀಟ್ ಬ್ಯಾಲ್ಟ್ ನ್ನು ಕಡ್ಡಾಯವಾಗಿ ಧರಿಸಬೇಕು ಇಲ್ಲದಿದ್ದರೆ ವಾಹನದಲ್ಲಿ ಕುಳಿತು ಕೊಳ್ಳುವುದಿಲ್ಲ ಎಂಬುದನ್ನು ಮಕ್ಕಳು ತಮ್ಮ ಪೋಷಕರಿಗೆ  ತಿಳಿಸಲು ಹೇಳಿದರು.


ಕಟ್ಪಾಡಿ ಹೊರಠಾಣೆ ಅಧಿಕಾರಿ  ವಿಕ್ರಂ ಬ್ರಿಟ್ಟೋ ರವರು ರಸ್ತೆ ಸುರಕ್ಷತೆಯ ಬಗ್ಗೆ ಹಲವಾರು ರಸ್ತೆ ಸುರ ಕ್ಷತಾ ನಿಯಮಗಳ ಸಂಕೇತಗಳ ಕುರಿತು ಮಕ್ಕಳಿಗೆ ಮಾಹಿತಿಯನ್ನು ನೀಡಿದರು .


ಜಿಲ್ಲಾ ಸಂಘಟನಾ ಅಧಿಕಾರಿಗಳಾದ ಸುಮನ್ ಶೇಖರ್ ಹಾಗೂ ಕಾಪು ಸ್ಥಳೀಯ  ಸಂಸ್ಥೆಯ ಅಧ್ಯಕ್ಷರಾದ ಗೀತಾ ಶಶಿಧರ್ ಕೋಟ್ಯಾನ್ ರವರು ಉಪಸ್ಥಿತರಿದ್ದರು. ಪ್ಲಾಕ್ ಲೀಡರ್  ಪೂರ್ಣಿಮಾ ರವರು ಕಾರ್ಯ ಕ್ರಮವನ್ನು ನಿರೂಪಿಸಿದರು. ಗೈಡ್ ಕ್ಯಾಪ್ಟನ್  ವಿದ್ಯಾರವರು ಸ್ವಾಗತಿಸಿ, ಕಾಪು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ  ಮರಿಯ ಅನಿತಾ ಮೆಂಡೋನ್ಸರವರು ಧನ್ಯವಾದಗಳನ್ನು ನೀಡಿದರು.