ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಇಲ್ಲಿ ಟ್ರಾಫಿಕ್ ಎಸ್ ಐ ಪ್ರಕಾಶ್ ಹಾಗೂ ಹೆಚ್ ಸಿ ದಾಮೋದರ್ ಇವರ ನೇತೃತ್ವದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಸಪ್ತಾಹದ ವನ್ನು ಮಾಹಿತಿ ಮತ್ತು ಜಾಗರೂಕತೆಯ ಬಗ್ಗೆ ಉಡುಪಿ ನಗರದ ವಿವಿಧ ಭಾಗಗಳಲ್ಲಿ ಪ್ರಾತ್ಯಕ್ಷತೆಯನ್ನು ಮಕ್ಕಳಿಂದಲೇ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು, ಮುಕುಂದ ಕೃಪಾ ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಶೆಟ್ಟಿ, ಶಿಕ್ಷಕ ವೃಂದ, ದಳನಾಯಕ ನಾಯಕಿಯರು ಉಪಸ್ಥಿತರಿದ್ದರು.