ದಿನಾಂಕ 17/01/25 ರಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ ಹಾಗು ಟ್ರಾಫಿಕ್ ಎಸ್ ಐ ಪ್ರಕಾಶ್ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಸಪ್ತಾಹದ ಮಾಹಿತಿ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿ ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಬಳಿ ವಿದ್ಯಾರ್ಥಿ ಗಳಿಂದಲೇ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಉಡುಪಿ ಸಂಚಾರ ಪೊಲೀಸ್ ಠಾಣೆಯ ಮಾಲತೇಶ್ ಹಾಗೂ ಸಿಬ್ಬಂದಿ ವರ್ಗದವರ ಸಂಪೂರ್ಣ ಸಹಕಾರದಿಂದ ಕಾರ್ಯಕ್ರಮ ಮಕ್ಕಳಿಗೆ ತಿಳಿಹೇಳುವಲ್ಲಿ ಯಶಸ್ವಿಯಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು, ಕಾರ್ಮಲ್ ಇಂಗ್ಲಿಷ್ ಶಾಲೆ ಕೆಮ್ಮಣ್ಣು ಇಲ್ಲಿಯ ಗೈಡ್ಸ್ ನಾಯಕಿ ಅಶ್ವಿನಿ ಉಪಾಧ್ಯ, ಸ್ಕೌಟ್ ಮಾಸ್ಟರ್ ಸಿಸ್ಟರ್ ಐರೀನ್ ಉಪಸ್ಥಿತರಿದ್ದರು