ಉಡುಪಿ, 11 ಜನವರಿ 2025: ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ, ಉಡುಪಿ ಇವರ ವತಿಯಿಂದ ನಡೆಯುತ್ತಿರುವ ತೆಂಕುತಿಟ್ಟು ಯಕ್ಷಗಾನ ನಾಟ್ಯ (ಹೆಜ್ಜೆಗಾರಿಕೆ) ತರಬೇತಿ ಕಾರ್ಯಕ್ರಮದ ಹೊಸ ತರಗತಿ ಆರಂಭಗೊಂಡಿದೆ .
ಕಳೆದ 8 ವರ್ಷಗಳಿಂದ ಉಡುಪಿಯ ಸೋದೆ ಮಠದಲ್ಲಿ ಸಮರ್ಥ ಯಕ್ಷಗುರು ಶ್ರೀ ರಾಕೇಶ್ ರೈ ಅಡ್ಕ ಇವರ ಮೂಲಕ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ. ತರಬೇತಿ ಉಚಿತವಾಗಿದ್ದು, ಪ್ರತೀ ಬುಧವಾರ ಸಂಜೆ ಗಂಟೆ 5.30ರಿಂದ 6.30ರವರೆಗೆ ನಡೆಯಲಿರುವುದು.
ಪ್ರತಿಷ್ಠಾನದ ಈ ಸತ್ಕಾರ್ಯಕ್ಕೆ ಸೋದೆ ಮಠದ ಶ್ರೀ ಶ್ರೀ ವಿಶ್ವವಲ್ಲಭ ಶ್ರೀಪಾದರು ತಮ್ಮ ಮಠದಲ್ಲಿ ಸ್ಥಳಾವಕಾಶವನ್ನು ಕಲ್ಪಿಸಿಕೊಟ್ಟು ಈ ಕಾರ್ಯವನ್ನು ಪೋಷಿಸುತ್ತಾ ಬಹುವಾಗಿ ಅನುಗ್ರಹಿಸುತ್ತಿದ್ದಾರೆ. ವಯಸ್ಸಿನ ಮಿತಿಯಿಲ್ಲದೆ ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪ್ರತಿಷ್ಠಾನದ ವತಿಯಿಂದ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ: ಸಂಖ್ಯೆ 9844212104 / 9663424981/ 9845150802 ಸಂಪರ್ಕಿಸಬಹುದು.
ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ, ಉಡುಪಿ