ದಿನಾಂಕ ೧೮-೦೨-೨೦೨೫ ರಂದು ಮಲ್ಪೆ ಕರಾವಳಿ ಕಾವಲು ಪೊಲೀಸ್ ಠಾಣಾ ಸರಹದ್ದಿಗೆ ಒಳಪಡುವ ದರಿಯಾ ಬಹದ್ದೂರ್‌ಘಡ (ಲೈಟ್‌ಹೌಸ್) ದ್ವೀಪ ಹಾಗೂ ಕೋಟೆ ದ್ವೀಪಗಳಿಗೆ ಭದ್ರತೆ, ಸ್ವಚ್ಚತೆ ಹಾಗೂ ಸಮಗ್ರ ಅಭಿವೃದ್ದಿ ಎಂಬ ದ್ಯೇಯದೊಂದಿಗೆ ಉಡುಪಿ ಶಾಸಕರಾದ ಶ್ರೀ ಯಶ್‌ಪಾಲ್ ಸುವರ್ಣ, ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ವಿದ್ಯಾಕುಮಾರಿ, ಐ.ಎ.ಎಸ್ ಇವರ ನೇತತ್ವದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಅರುಣ್.ಕೆ, ಐ.ಪಿ.ಎಸ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಪ್ರತೀಕ್ ಬಾಯಲ್, ಐ.ಎ.ಎಸ್, ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರಾದ ಶ್ರೀ ಮಿಥುನ್ ಹೆಚ್.ಎನ್, ಐ.ಪಿ.ಎಸ್ ಇವರ ಮಾರ್ಗದರ್ಶನದಲ್ಲಿ ಬಹದ್ದೂರ್‌ಘಡ (ಲೈಟ್‌ಹೌಸ್) ದ್ವೀಪ ಹಾಗೂ ಕೋಟೆ ದ್ವೀಪಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿರುತ್ತದೆ.
ಸದರಿ ಕಾರ್ಯಕ್ರಮದಲ್ಲಿ ಕರಾವಳಿ ಕಾವಲು ಪೊಲೀಸ್ ಉಪಾಧೀಕ್ಷಕರಾದ ಶ್ರೀ ತುಳಜಪ್ಪ ಸುಲ್ಫಿ, ಸಿ.ಎಸ್.ಪಿ ಕೇಂದ್ರ ಕಛೇರಿಯ ಅಧಿಕಾರಿ ಸಿಬ್ಬಂದಿಗಳು, ಮಲ್ಪೆ ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಅಧಿಕಾರಿ ಸಿಬ್ಬಂದಿಯವರು, ಮಲ್ಪೆ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಯವರು, ಕೆ.ಎನ್.ಡಿ ಸಿಬ್ಬಂದಿಗಳು, ಉಡುಪಿ ನಗರ ಸಭೆಯ ಪೌರಕಾರ್ಮಿಕರು, ಬಂದರು ಇಲಾಖೆಯ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಸಿಬ್ಬಂದಿಯವರು, ಸ್ಥಳೀಯ ವೈದ್ಯಾಧಿಕಾರಿಗಳು, ಅಗ್ನಿಶಾಮಕದಳದ ಅಧಿಕಾರಿ ಸಿಬ್ಬಂದಿಯವರು, ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಯವರು ಹಾಗೂ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ಸುವರ್ಣ ಮತ್ತು ಮೀನುಗಾರರ ಸಂಘಟನೆಯ ಪದಾಧಿಕಾರಿಗಳು, ಉರಗ ತಜ್ಞರಾದ ಸ್ನೇಕ್ ಬಾಬಣ್ಣ ಹಾಗೂ ಜಲ ಕ್ರೀಡಾ ತರಬೇತುದಾರರು ಭಾಗವಹಿಸಿರುತ್ತಾರೆ.