ದಿನಾಂಕ -16-02-2025ರ ಭಾನುವಾರ ರಂದು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲೆಯ 76ನೇ ಗಣರಾಜ್ಯೋತ್ಸವ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು .
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಶ್ರೀ ಪ್ರಸಾದ್ ರಾಜ್ ಕಾಂಚನ್ ಉದ್ಘಾಟನೆಯನ್ನು ನೆರವೇರಿಸಿ ಕೊಟ್ಟರು. ತದನಂತರ ಪ್ರಸಾದ್ ರಾಜ್ ಕಾಂಚನ್ ರವರು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಪರವಾಗಿ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣ ಗೌಡ ಸಂಘಟನೆ ಕರ್ನಾಟಕದಲ್ಲಿ ಅತ್ಯುತ್ತಮವಾಗಿ ಕನ್ನಡವನ್ನು ಕರ್ನಾಟಕದಲ್ಲಿ ಬೆಳೆಸಿಕೊಂಡು ಹೋಗಿದ್ದಾರೆ.ಎಂದು ಪ್ರಸಾದ್ ರಾಜ್ ಕಾಂಚನ್ ಯವರು ಜಿಲ್ಲೆಯ ಯಾವುದೇ
ಕರ್ನಾಟಕ ರಕ್ಷಣಾ ವೇದಿಕೆಯ ಪರವಾಗಿ ನಾನಿದ್ದೇನೆ ಎಂದು ಭರವಸೆ ನೀಡಿದರು.ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಾಗಿತ್ತು
ಈ ಸಂದರ್ಭದಲ್ಲಿ ವೈದ್ಯರದ ಹೇರಿಕ್ ಬ್ರಹ್ಮಾವರ ಉಚಿತ ಆರೋಗ್ಯ ತಪಾಸಣೆ ಶಿಬಿರದ ಪ್ರಾಸ್ತವಿಕ ವಿಷಯಗಳನ್ನು ಆರೋಗ್ಯ ಶಿಬಿರದ ಬಗ್ಗೆ ತಿಳಿಸಿದರು. ಮತ್ತು ಸಹ ವೈದ್ಯರು ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ
ಉಪಾಧ್ಯಕ್ಷರಾದ ಗೋಪಾಲ್ ದೊರೆ ಉಡುಪಿ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಗೀತಾ ಪಾಂಗಾಳ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಲ್ಫೋನ್ಸ್
ಜಿಲ್ಲಾ ಕಾರ್ಯದರ್ಶಿಯಾದ ಸಿದ್ದಣ್ಣ. ಜಿಲ್ಲಾ ಸಾಂಸ್ಕೃತಿ ಕಾರ್ಯದರ್ಶಿ ಯಾದ ಎಸ್ ಕೃಷ್ಣ.
ಹಾಗೂ ಜಿಲ್ಲಾ ಕಾರ್ಯದರ್ಶಿಯಾದ ವಿಜಯ್ ಪೂಜಾರಿ. ಉಡುಪಿ ಜಿಲ್ಲಾ ಜಾಲತಾಣ ಸಂಚಾಲಕರಾದ ರಶ್ಮಿ.
ಕಾಪು ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಶಶಿಕಲಾ ನವೀನ್. ಹಾಗೂ ಜಿಲ್ಲಾ ಸದಸ್ಯರುಗಳು ಮತ್ತು ತಾಲೂಕು ಸದಸ್ಯರುಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ರಶ್ಮಿ ಜಿಲ್ಲಾ ಜಾಲತಾಣ ಸಂಚಾಲಕರು ನೆರವೇರಿಸಿದ್ದರು.