ಲಕ್ಷ್ಮೀ ಗುರುರಾಜ್ ಎನ್.ಎನ್. ಯು (ರಿ) ಸಂಸ್ಥೆಯ ಪಂಚ ತ್ರಿಂಶತ್ ಉತ್ಸವ 25-26ರ ದ್ವಿತೀಯ ಕಾರ್ಯಕ್ರಮ 'ಗೆಜ್ಜೆ ನಿನಾದ 'ಭರತ ನಾಟ್ಯ ಕಾರ್ಯಕ್ರಮ ಯಕ್ಷಗಾನ ಕಲಾರಂಗದ ಐವೈಸಿ ಹವಾ ನಿಯಂತ್ರಿತ ಸಭಾಂಗಣದಲ್ಲಿ ನಡೆಯಿತು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್ ರಾವ್ ಕಾರ್ಯಕ್ರಮ ಉದ್ಘಾಟಿಸಿ 35 ವರ್ಷಗಳ ಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಉಡುಪಿಯ ಹಿರಿಯ ನೃತ್ಯ ಗುರು ನಾರಾಯಣ್ ಭಟ್ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕಿ ವಿದುಷಿ ಲಕ್ಷ್ಮೀ ಗುರುರಾಜ್ ಸ್ವಾಗತಿಸಿದರು. ಸಂಸ್ಥೆಯ ವಿದ್ಯಾರ್ಥಿನಿ ವಿದುಷಿ ಅರ್ಪಿತಾ ಹೆಗಡೆ ನಿರೂಪಿಸಿದರು.
ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ 'ಗೆಜ್ಜೆ ನಿನಾದ' ನೃತ್ಯ ಕಾರ್ಯಕ್ರಮ ಪ್ರದರ್ಶಿಸಲ್ಪಟ್ಟಿತು.