Header Ads Widget

ಡಿಜಿಟಲ್ ಶಿಕ್ಷಣದಲ್ಲಿ ಮಾಹೆ ಮೈಲಿಗಲ್ಲು

ಇದೇ ಮೊದಲ ಬಾರಿಗೆ ಆನ್‌ಲೈನ್ ಪದವೀಧರರಿಗಾಗಿ ಫೆಬ್ರವರಿ 8 ರಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಘಟಿಕೋತ್ಸವವನ್ನು ಆಯೋಜಿಸಿದ್ದು, ಸ್ನಾತಕೋತ್ತರ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 426 ವಿದ್ಯಾರ್ಥಿಗಳ ಸಾಧನೆಗಳನ್ನು ಆಚರಿಸಿದೆ. ಎಂಬಿಎ (ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್), ಮಾಸ್ಟರ್ ಆಫ್ ಸೈನ್ಸ್ (ಎಂಎಸ್ಸಿ) ಇನ್ ಬಿಸಿನೆಸ್ ಅನಾಲಿಟಿಕ್ಸ್, ಡಾಟಾ ಸೈನ್ಸ್ ನಲ್ಲಿ ಎಂಎಸ್ಸಿ, ಬ್ಯುಸಿನೆಸ್‌ ಅನಾಲಿಟಿಕ್ಸ್ ನಲ್ಲಿ ಪೋಸ್ಟ್ ಗ್ರಾಜ್ಯುಯೇಟ್ ಸರ್ಟಿಫಿಕೇಟ್ (ಪಿಜಿಸಿಪಿ), ಮತ್ತು ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ ಮೆಂಟ್ ನಲ್ಲಿ ಪಿಜಿಸಿಪಿ ಮೂಲಕ  ಸಂಪೂರ್ಣ ಆನ್‌ಲೈನ್ ಕಲಿಕೆಯ ಅನುಭವ ಒದಗಿಸಿದೆ.  

ಜಗತ್ತಿನಾದ್ಯಂತ 22 ವಿವಿಧ ದೇಶಗಳ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಿಗೆ ಹಾಜರಾಗಿದ್ದರು. ದಕ್ಷಿಣ ಸುಡಾನ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಉಗಾಂಡಾ ದೇಶಗಳ ವಿದ್ಯಾರ್ಥಿಗಳು  ತಮ್ಮ ಪದವಿಗಳನ್ನು ಪಡೆಯಲು ವೈಯಕ್ತಿಕವಾಗಿ ಹಾಜರಾಗಿದ್ದರು. ಇದು ಮಾಹೆಯ ಆನ್‌ಲೈನ್ ಶಿಕ್ಷಣ ಕಾರ್ಯಕ್ರಮಗಳ ದೂರಗಾಮಿ ಪರಿಣಾಮವನ್ನು ಎತ್ತಿ ತೋರಿಸಿದೆ. ಮಾಹೆಯ ಆನ್‌ಲೈನ್ ಶಿಕ್ಷಣ ಉಪಕ್ರಮವು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಾಲುದಾರಿಕೆಯೊಂದಿಗೆ ಆಫ್ರಿಕನ್ ಯುವಕರಿಗೆ ಉನ್ನತ ಶಿಕ್ಷಣವನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ. ಆನ್‌ಲೈನ್ ಶಿಕ್ಷಣದ ಮೊದಲ ಘಟಿಕೋತ್ಸವದಲ್ಲಿ ಸುಮಾರು 204 ಆಫ್ರಿಕನ್ ವಿದ್ಯಾರ್ಥಿಗಳು ಇ-ವಿದ್ಯಾ ಭಾರತಿ ಪ್ಯಾನ್-ಆಫ್ರಿಕನ್ ಸ್ಕಾಲರ್‌ಶಿಪ್ ಪ್ರಾಜೆಕ್ಟ್ ಅಡಿಯಲ್ಲಿ ತಮ್ಮ ಪದವಿಗಳನ್ನು ಪಡೆದರು.

ಆನ್‌ಲೈನ್ ಶಿಕ್ಷಣದ ವಿಶ್ವಾಸಾರ್ಹತೆ  ಬಲಪಡಿಸುವ ಯುಜಿಸಿ ಮಾರ್ಗಸೂಚಿಗಳು, "ಆನ್‌ಲೈನ್ ಪದವಿಯನ್ನು ಕ್ಯಾಂಪಸ್‌ಗಳಲ್ಲಿ ನೀಡಲಾಗುವ ಸಾಂಪ್ರದಾಯಿಕ ಪದವಿಗಳಿಗೆ ಸಮಾನವೆಂದು ಗುರುತಿಸಿವೆ ಮತ್ತು ವಿದ್ಯಾರ್ಥಿಗಳು ತಮ್ಮ ಅರ್ಹತೆಗೆ ಅನುಗುಣವಾಗಿ ಎಲ್ಲ ಉದ್ಯೋಗಾವಕಾಶಗಳು ಮತ್ತು ಉನ್ನತ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸಬಹುದು." ಎಂದು ಹೇಳಿವೆ ಮಾಹೆ ತನ್ನ ಆನ್‌ಲೈನ್ ಪದವಿ ಕಾರ್ಯಕ್ರಮಗಳನ್ನು ಸೆಪ್ಟೆಂಬರ್ 2022 ರಲ್ಲಿ ಪ್ರಾರಂಭಿಸಿದ್ದು, ಈ ಕಲಿಕೆಯು ಭೌಗೋಳಿಕ ಗಡಿಗಳನ್ನು ಮೀರಿ ಭವಿಷ್ಯವನ್ನು ರೂಪಿಸಿದೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೊ-ಚಾನ್ಸೆಲರ್ ಡಾ. ಎಚ್.ಎಸ್.ಬಲ್ಲಾಳ್ ಅವರು ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ಮಾಹೆಯ ಪ್ರೊ ವೈಸ್ ಚಾನ್ಸೆಲರ್ (ತಂತ್ರಜ್ಞಾನ ಮತ್ತು ವಿಜ್ಞಾನ) ಡಾ.ನಾರಾಯಣ ಸಭಾಹಿತ್, ಪ್ರೊ ವೈಸ್ ಚಾನ್ಸೆಲರ್ (ಆರೋಗ್ಯ ವಿಜ್ಞಾನ)ದ ಡಾ. ಶರತ್ ಕೆ ರಾವ್ ಪ್ರೊ ವೈಸ್‌ ಚಾನ್ಸೆಲರ್ ಡಾ. ದಿಲೀಪ್ ಜಿ.ನಾಯಕ್, ಪ್ರೊ ವೈಸ್ ಚಾನ್ಸೆಲರ್  (MLHS & ಹೆಡ್ - MAHE ಬೆಂಗಳೂರು ಕ್ಯಾಂಪಸ್)ನ ಡಾ.ಮಧು ವೀರ ರಾಘವನ್, ರಿಜಿಸ್ಟ್ರಾರ್ ಡಾ. ಗಿರಿಧರ್ ಪಿ ಕಿಣಿ, ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ ವಿನೋದ್ ವಿ ಥಾಮಸ್  ಮತ್ತು ಆನ್‌ಲೈನ್ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಮನೋಜಕುಮಾರ್ ನಾಗಸಂಪಿಗೆ, ಗೌರವ ಅತಿಥಿಯಾಗಿ ಯುನೆಕ್ಸ್ಟ್ ಲರ್ನಿಂಗ್‌ನ ಸಿಇಒ ಶ್ರೀ ಅಂಬ್ರಿಶ್ ಸಿನ್ಹಾ ಅವರು ಉಪಸ್ಥಿತರಿದ್ದರು. 

ಡಾ. ಎಚ್ ಎಸ್ ಬಲ್ಲಾಳ್, ಪ್ರೊ-ಚಾನ್ಸಲರ್, ಮಾಹೆ ಅವರು ಮಾತನಾಡಿ, “ಆನ್‌ಲೈನ್ ಪದವೀಧರರಿಗೆ ಘಟಿಕೋತ್ಸವದ ಮೂಲಕ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಹತ್ವದ ಮೈಲಿಗಲ್ಲನ್ನು ಸಾಧಿಸುವುದರೊಂದಿಗೆ ವಿದ್ಯಾರ್ಥಿಗಳ ಜೀವನದ ಮೇಲೆ ಉತ್ತಮ ರೀತಿಯಲ್ಲಿ ಪರಿಣಾಮ ಬೀರುವ ಜೊತೆಗೆ ಅಂತಾರರಾಷ್ಟ್ರೀಯ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬಲಪಡಿಸುವ ಮತ್ತು ನಿರ್ವಹಿಸುವುದನ್ನು ಎತ್ತಿ ತೋರಿಸುತ್ತದೆ. ಈ ಮಹತ್ವದ ಸಂದರ್ಭ ನಮ್ಮ ಪದವೀಧರರಿಗೆ ನಿರ್ಣಾಯಕ ಮೈಲಿಗಲ್ಲು ಮಾತ್ರವಲ್ಲದೆ ಮಾಹೆ ಪರಂಪರೆಯಲ್ಲಿ ಮಹತ್ವದ ಅಧ್ಯಾಯವಾಗಿದೆ, ಏಕೆಂದರೆ ನಾವು ವಿಕಾಸಗೊಳ್ಳುತ್ತಿರುವ ಜಗತ್ತಿನಲ್ಲಿ ಶಿಕ್ಷಣಕ್ಕಿರುವ ಭವಿಷ್ಯವನ್ನು ಸ್ವೀಕರಿಸುತ್ತೇವೆ ಎಂದರು.

ಲೆಫ್ಟಿನೆಂಟ್ ಜನರಲ್ ಡಾ. ಎಂ.ಡಿ. ವೆಂಕಟೇಶ್ ವಿಎಸ್‌ಎಂ, (ನಿವೃತ್ತ) ಉಪಕುಲಪತಿ, ಮಾಹೆ ಮಾತನಾಡಿ, “ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಉಪಕ್ರಮವು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳ ಶಿಕ್ಷಣವನ್ನು ರೂಪಿಸುತ್ತಿದೆ. ಆನ್‌ಲೈನ್ ಪದವೀಧರರಿಗಾಗಿ ನಡೆದ ಮೊದಲ ಘಟಿಕೋತ್ಸವವು ಭವಿಷ್ಯದ ಶಿಕ್ಷಣವನ್ನು ಅಳವಡಿಸಿಕೊಳ್ಳುವಲ್ಲಿ ಮಾಹೆಯ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಸೆಪ್ಟೆಂಬರ್ 2022ರಲ್ಲಿ ಯುಜಿಸಿ ಮಾರ್ಗಸೂಚಿಗಳ ಅಡಿಯಲ್ಲಿ ಪ್ರಾರಂಭವಾದಾಗಿನಿಂದ ಮಾಹೆ ಆನ್‌ಲೈನ್ ಶಿಕ್ಷಣ ಕಾರ್ಯಕ್ರಮಗಳ ಕ್ಷೇತ್ರದಲ್ಲಿ ಪ್ರವರ್ತಕನಾಗಿದೆ. ಘಟಿಕೋತ್ಸವ ಕಾರ್ಯಕ್ರಮವು ಕೈಗಾರಿಕೆಗಳಲ್ಲಿ ಕೆಲಸ ಮಾಡುವ ವೃತ್ತಿಪರರನ್ನು ಒಟ್ಟಿಗೆ ಸೇರಿಸುವ ಮೂಲಕ ಅನೇಕರಿಗೆ ಪ್ರೇರಣೆಯಾಗಿದೆ ಎಂದರು.