Header Ads Widget

​ ಮಾನವೀಯ ಸೇವೆಯೇ ರೆಡ್ ಕ್ರಾಸ್ ನ ಮೂಲತತ್ವ~ ಪ್ರೊ। ನಿಕೇತನ

 

ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್  ವಾರ್ಷಿಕ ಶಿಬಿರದ ಉದ್ಘಾಟನ ಗೋವರ್ಧನ ಗೋಶಾಲೆ  ನೀಲಾವರದಲ್ಲಿ   ಕಾರ್ಯಕ್ರಮವು ದಿನಾಂಕ 21.02.202​ 5ರಂದು​ ನಡೆಯಿತು.



ಮಾನವೀಯ ಸೇವೆಯ ಮೂಲಕ ಜನರ ಸೇವೆಯನ್ನು ಮಾಡುವುದು ರೆಡ್ ಕ್ರಾಸ್  ಮುಖ್ಯ ಉದ್ದೇಶವಾಗಿದೆ.​ ಮಾನವೀಯತೆಯೇ ಶಾಂತಿಸ್ವಾತಂತ್ರ್ಯಐಕ್ಯತೆ​, ರೆಡ್ ಕ್ರಾಸ್ ಪ್ರತಿಪಾದಿಸುವ ಮೂಲತತ್ವಗಳು.



 ತತ್ವಗಳನ್ನು ಅರ್ಥಮಾಡಿಕೊಂಡು ಸ್ವಯಂ ಸೇವಕರು ರೆಡ್ ಕ್ರಾಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತ್ಯಗತ್ಯ. ಶಿಬಿರವು ಸ್ವಯಂ ಸೇವಕರಿಕೆ ಮನವರಿಕೆ ಮಾಡುವ ಕಾರ್ಯವನ್ನು ಮಾಡಬೇಕೆಂದು ಡಾ।ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ।ನಿಕೇತನ ಇವರು ಹೇಳಿದರು.



ಮಹಾತ್ಮ  ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ।.ದೇವಿದಾಸ್ ಎಸ್.ನಾಯ್ಕ ಇವರುಅಧ್ಯಕ್ಷತೆ ವಹಿಸಿ ಸಹಬಾಳ್ವೆ,ಮಾನವೀಯತೆ ,ಹಾಗೂ ಸೇವೆಯ ಮಹತ್ವದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್  ಶ್ರೀ ಬಿ.ಪಿ ವರದರಾಯ್ ಪೈಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜಿನ ಪ್ರೊ.ಲಕ್ಷ್ಮೀನಾರಾಯಣ ಕಾರಂತ.ಶ್ರೀಮತಿ ಕೆ.ಬೇಬಿಶ್ರೀಮತಿ ಗೀತಾ ಬಾಳಿಗಡಾ। ಮಲ್ಲಿಕಾ  ಶೆಟ್ಟಿರೆಡ್ ಕ್ರಾಸ್ ಯೋಜನಾಧಿಕಾರಿ  ಕು। ದೀಪಿಕಾ ಉಪಸ್ಥಿತ ರಿದ್ದರು . ಪ್ರಜ್ಞಾ ಸ್ವಾಗತಿಸಿದರುಪುಣ್ಯ ವಂದನಾರ್ಪಣೆಗೈದರು,  ದಿಶಾ ನಿರೂಪಿಸಿದರು.