Header Ads Widget

FICCI ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮದ 3ನೇ ಬ್ಯಾಚ್ ಮಾಹೆಯಲ್ಲಿ ಪ್ರಾರಂಭ

ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ), ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಹಯೋಗದೊಂದಿಗೆ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮದ (LDP) ಮೂರನೇ ಬ್ಯಾಚ್ ಅನ್ನು ಇಂದಿನಿಂದ ಆರಂಭಿಸಲಾಗಿದೆ. ಮೂರು ದಿನಗಳ ಈ ವಸತಿ ಸಹಿತ ಕಾರ್‍ಯಕ್ರಮವನ್ನು ಮಣಿಪಾಲದ ಮಾಹೆ ಕ್ಯಾಂಪಸ್ಸಿನಲ್ಲಿ ಆಯೋಜಿಸಲಾಗಿದೆ. ಶಿಕ್ಷಣ ಕ್ಷೇತ್ರದ ನಾಯಕರ ಸಾಮರ್ಥ್ಯ ಹೆಚ್ಚಿಸುವ ಗುರಿಯನ್ನು ಇಂದು ಹೊಂದಿದ್ದು, ಇದಕ್ಕಾಗಿ ನಿಖರವಾಗಿ ವಿನ್ಯಾಸಗೊಳಿಸಲಾದ 9 ಸರಣಿ ಮಾದರಿಗಳನ್ನು ಇದು ಹೊಂದಿದೆ. 

FICCI LDP ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳ (HEIs) ನಿರ್ದೇಶಕರು, ಡೀನ್‌ಗಳು, ರಿಜಿಸ್ಟ್ರಾರ್‌ಗಳು, ಹಿರಿಯ ಪ್ರಾಧ್ಯಾಪಕರು ಸೇರಿದಂತೆ ಶೈಕ್ಷಣಿಕ ನಾಯಕರ ವೈವಿಧ್ಯಮಯ ಗುಂಪನ್ನು ಒಟ್ಟುಗೂಡಿಸಿದೆ. ಆಧುನಿಕ ಶಿಕ್ಷಣದ ಸಂಕೀರ್ಣತೆಯನ್ನು ನಿರ್ವಹಿಸಲು ಮತ್ತು ಅವುಗಳನ್ನು 'ಭವಿಷ್ಯಕ್ಕೆ-ಸಿದ್ಧ' ವಾಗುವಂತೆ ರೂಪಿಸಲು ಅಗತ್ಯವಾದ ಸುಧಾರಿತ ಜ್ಞಾನ ಮತ್ತು ನಾಯಕತ್ವ ಕೌಶಲಗಳನ್ನು ಹೊಂದಿರುವ ವೃತ್ತಿಪರರನ್ನು ರೂಪಿಸಲು ಕಾರ್‍ಯಕ್ರಮ ಸಿದ್ಧಪಡಿಸಲಾಗಿದೆ. 

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಉಪಕುಲಪತಿ ಮತ್ತು FICCI ಉನ್ನತ ಶಿಕ್ಷಣ ಸಮಿತಿಯ ಸಹ ಅಧ್ಯಕ್ಷರಾದ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ ವೆಂಕಟೇಶ್, VSM (ನಿವೃತ್ತ), ಅವರು ತಮ್ಮ ಮುಖ್ಯ ಭಾಷಣದಲ್ಲಿ ನಾಯಕತ್ವದ ಮೂಲಭೂತ ಅಂಶಗಳನ್ನು ಮುಖ್ಯವಾಗಿ ಹೇಳಿದರು. ವೈಯಕ್ತಿಕ, ಸಾಂಸ್ಥಿಕ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ಅದರ ವಿವಿಧ ಹಂತಗಳು ಮತ್ತು ಮಹತ್ವವನ್ನು ವಿವರಿಸಿದರು. ಸಂಭಾವ್ಯ ಶೈಕ್ಷಣಿಕ ನಾಯಕರನ್ನು ಗುರುತಿಸುವಲ್ಲಿ ಮತ್ತು ಪೋಷಿಸಲು ರಚನಾತ್ಮಕ ವಿಧಾನದ ಅಗತ್ಯವನ್ನು ಅವರು ಒತ್ತಿಹೇಳುತ್ತ, ಶೈಕ್ಷಣಿಕ ಪರಿಸರ ವ್ಯವಸ್ಥೆಯಲ್ಲಿ ಪಾಲುದಾರರು ಎದುರಿಸುತ್ತಿರುವ ಸವಾಲುಗಳನ್ನು ಸಹ ಪ್ರಸ್ತಾಪಿಸಿದರು. ಇವುಗಳಲ್ಲಿ ಪಾಲುದಾರರ ಪ್ರಜ್ಞೆ, ನಿರೀಕ್ಷೆಗಳನ್ನು ನಿರ್ವಹಿಸುವುದು, ಬಜೆಟ್ ಮತ್ತು ಹಣಕಾಸು, ಉದ್ಯಮ ಪಾಲುದಾರಿಕೆಗಳು ಮತ್ತು ನಿಯಂತ್ರಕ ಅನುಸರಣೆಗಳು ಸೇರಿವೆ. ಇಂದು ಕ್ಷಿಪ್ರವಾಗಿ ವಿಕಸನಗೊಳ್ಳುತ್ತಿರುವ ಮತ್ತು ಪರಿವರ್ತಿತ ಕಾಲದಲ್ಲಿ ಶೈಕ್ಷಣಿಕ ನಾಯಕನ ಅಗತ್ಯ ಗುಣಲಕ್ಷಣಗಳನ್ನು ಅವರು ಬೊಟ್ಟು ಮಾಡಿದರು. ಸಂಶೋಧನೆ, ಕಾರ್ಯಾಚರಣೆ ಮತ್ತು ಕಾರ್ಯತಂತ್ರದ ನಿರ್ವಹಣೆ, ತಂಡ-ನಿರ್ಮಾಣ ಕೌಶಲಗಳು, ಮಾನ್ಯತೆ ಮತ್ತು ಶ್ರೇಯಾಂಕದಲ್ಲಿ ಪ್ರಾವೀಣ್ಯತೆಯನ್ನುಸಮಗ್ರವಾಗಿ ಅಭಿವೃದ್ಧಿಪಡಿಸಬೇಕಾದ ಮಹತ್ವವನ್ನು ಅವರು ಒತ್ತಿ ಹೇಳಿದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (HEIs) ಉತ್ತರಾಧಿಕಾರದ ಯೋಜನೆಯ ನಿರ್ಣಾಯಕ ಪ್ರಾಮುಖ್ಯತೆಯನ್ನು ಹೇಳುವುದರೊಂದಿಗೆ, ದೃಢ ಆಡಳಿತ, ನಾವೀನ್ಯತೆ ಮತ್ತು ಅಪಾಯ ನಿರ್ವಹಣೆಗೆ ಪರಿಣಾಮಕಾರಿ ಪ್ರತಿಭೆಗಳನ್ನು ರೂಪಿಸುವುರೊಂದಿಗೆ ಭವಿಷ್ಯದ ನಾಯಕತ್ವ ಪರಿವರ್ತನೆಗೆ ಸಿದ್ಧತೆಯನ್ನು ಖಾತ್ರಿಪಡಿಸಬೇಕೆಂದರು.

 

FICCI ಉನ್ನತ ಶಿಕ್ಷಣ ಸಮಿತಿಯ ಸಲಹೆಗಾರರು, ಮತ್ತು NMIMS ಮಾಜಿ ಉಪಕುಲಪತಿ ಪ್ರೊ. (ಡಾ.) ರಾಜನ್ ಸಕ್ಸೇನಾ ಅವರು ಮಾತನಾಡಿ, ಬದಲಾವಣೆಯನ್ನು ಅಳವಡಿಸಿಕೊಳ್ಳಲು ಸಿದ್ಧತೆಯನ್ನು ಅಭಿವೃದ್ಧಿಪಡಿಸುವ ತುರ್ತು ಅಗತ್ಯವಿದೆ ಎಂದರು. ಸಂಭಾವ್ಯ ವಿಪತ್ತುಗಳನ್ನು ತಪ್ಪಿಸಲು, ನಿಶ್ಚಲತೆಯನ್ನು ನಿವಾರಿಸಲು ಮತ್ತು ವ್ಯವಸ್ಥಿತ ಸಮಸ್ಯೆಗಳನ್ನು ಪರಿಹರಿಸಲು ಭವಿಷ್ಯದ ಸವಾಲುಗಳನ್ನು ನಿರೀಕ್ಷಿಸುವ ಮತ್ತು ಸಿದ್ಧಪಡಿಸುವ ಪ್ರಾಮುಖ್ಯತೆ ಇದೆ. ಇದು ಶೈಕ್ಷಣಿಕ ಸಮುದಾಯದಲ್ಲಿ ಕಡಿಮೆ ದಾಖಲಾತಿ ಮತ್ತು ನಿರುತ್ಸಾಹಕ್ಕೆ ಕಾರಣವಾಗಬಹುದು ಎಂದರು. ವಿದ್ಯಾರ್ಥಿಗಳ ಯಶಸ್ಸು ಮತ್ತು HEI ಗಳ ಪ್ರಸ್ತುತತೆ ಉದ್ಯೋಗ ಮಾರುಕಟ್ಟೆಯ ಬದಲಾವಣೆ ಗುರುತಿಸುವುದರ ಮೇಲೆ ಅವಲಂಬಿತವಾಗಿದೆ ಎಂದೂ ಪ್ರೊ. ಸಕ್ಸೇನಾ ಹೇಳಿದರು. ಸಂಸ್ಥೆಗಳು ಈ ಬದಲಾವಣೆಗಳಿಗೆ ಹೊಂದಿಕೊಳ್ಳುವವರೆಗೆ ಕೆಲವೊಮ್ಮೆ ಉಳಿಯಬಹುದಾದ ಆವರ್ತಕ ಸವಾಲುಗಳ ಬಗ್ಗೆಯೂ ಹೇಳಿದರು. ವಿದ್ಯಾರ್ಥಿಗಳು, ಉದ್ಯಮ ಮತ್ತು ಸಮಾಜಕ್ಕೆ ಮೌಲ್ಯವನ್ನು ಸೇರಿಸುವಲ್ಲಿ ನಿರಂತರ ಗಮನವಿಡಬೇಕು ಎಂದು ಪ್ರತಿಪಾದಿಸಿದರು. ಶಿಕ್ಷಣದಲ್ಲಿನ ಪರಿವರ್ತನೆ ಉನ್ನತ ನಾಯಕತ್ವದಿಂದ ಪ್ರಾರಂಭವಾಗುತ್ತದೆ ಮತ್ತು ಇದು ಅಧ್ಯಾಪಕರು ಮತ್ತು ಆಡಳಿತಾತ್ಮಕ ಹಂತಗಳಲ್ಲಿ ವ್ಯಾಪಿಸುತ್ತದೆ ಎಂದು ಅವರು ಹೇಳಿದರು.

 

FICCI ಶಿಕ್ಷಣ ಮತ್ತು ಕೌಶಲ್ಯದ ನಿರ್ದೇಶಕರು ಮತ್ತು ಮುಖ್ಯಸ್ಥರಾದ ಡಾ. ರಾಜೇಶ್ ಪಂಕಜ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಭಾರತದಲ್ಲಿ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾಪಿಸಿದ ಮಹತ್ವದ ಪೂರಕ ಪ್ರಯತ್ನಗಳು ರೂಪಿಸಿದ ಮಾನದಂಡಗಳ ಬಗ್ಗೆ ಹೇಳಿದರು. ಈ ಶಿಕ್ಷಣ ಸಂಸ್ಥೆಗಳು ಜಾಗತಿಕ ಮಟ್ಟದ ಉದ್ಯೋಗಿಗಳನ್ನು ಸಮರ್ಥ ಮತ್ತು ಸಂಬಂಧಿತ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದರು. ಇದಲ್ಲದೆ, FICCI LDP ಯ ದೃಷ್ಟಿ HEI ಗಳಲ್ಲಿ ಸಾಮರ್ಥ್ಯದ ವೃದ್ಧಿಯ ಸುತ್ತ ಕೇಂದ್ರೀಕೃತವಾಗಿದೆ. ವಿಮರ್ಶಾತ್ಮಕ ಮಾನದಂಡಗಳನ್ನು ಪೂರೈಸುವ ಮತ್ತು HEI ಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ರಚನಾತ್ಮಕ ನಾಯಕತ್ವವನ್ನು ರೂಪಿಸಲು ಉದ್ಯಮ ಮತ್ತು ಶೈಕ್ಷಣಿಕ ವಲಯಗಳೆರಡರಿಂದಲೂ ನವೀನ ಒಳನೋಟಗಳನ್ನು ಸಂಯೋಜಿಸಲು FICCI ಒಂದು ಸಂಘವಾಗಿ ಹೇಗೆ ಅನನ್ಯ ಸ್ಥಾನವನ್ನು ಪಡೆದಿದೆ ಎಂಬ ಬಗ್ಗೆ ಅವರು ವಿವರಿಸಿದರು. 

ಬದಲಾವಣೆ ನಿರ್ವಹಣೆ, ಪ್ರತಿಭೆ ನಿರ್ವಹಣೆ, ಸಂಶೋಧನೆ ಮತ್ತು ನಾವೀನ್ಯತೆ, ತಂತ್ರಜ್ಞಾನ ಏಕೀಕರಣ, ಕಲಿಕೆಯ ಸಂಸ್ಕೃತಿ ಬೆಳೆಸುವುದು, ಆರ್ಥಿಕ ಸುಸ್ಥಿರತೆ, ಅಂತಾರಾಷ್ಟ್ರೀಕರಣ ಮತ್ತು ಉದ್ಯಮ ಪಾಲುದಾರಿಕೆಗಳನ್ನು ಒಳಗೊಂಡಂತೆ ಶೈಕ್ಷಣಿಕ ನಾಯಕತ್ವದ ನಿರ್ಣಾಯಕ ಅಂಶಗಳನ್ನು ಮಾದರಿಗಳು ಒಳಗೊಂಡಿವೆ. ಭಾಗವಹಿಸುವವರ ಕೌಶಲಗಳನ್ನು ಉತ್ಕೃಷ್ಟಗೊಳಿಸಲು ಮತ್ತು ಉನ್ನತೀಕರಿಸುವುದು ಮಾತ್ರವಲ್ಲದೆ ಗಣನೀಯ ಬೆಳವಣಿಗೆ ಮತ್ತು ಪೂರಕ ಅವಕಾಶಗಳನ್ನು ಉತ್ತೇಜಿಸುವ ವಾತಾವರಣದಲ್ಲಿ ಅವರನ್ನು ತೊಡಗಿಸಲು ಈ ಅವಧಿಗಳನ್ನು ವಿನ್ಯಾಸಗೊಳಿಸಲಾಗಿದೆ. ಭಾಗವಹಿಸುವವರು ನೈಜ ಕೇಸ್‌ ಸ್ಟಡಿಗಳು, ಸಂವಾದಾತ್ಮಕ ಅವಧಿಗಳು ಮತ್ತು ಆಧುನಿಕ ಉನ್ನತ ಶಿಕ್ಷಣದ ಸಂಕೀರ್ಣತೆ ಮತ್ತು ಸೂಕ್ಷ್ಮ ವ್ಯತ್ಯಾಸಗಳನ್ನು ಪ್ರತಿಬಿಂಬಿಸುವ ಸಹಯೋಗದ ಕಲಿಕೆಯ ಅನುಭವಗಳನ್ನು ಹೊಂದಲಿದ್ದಾರೆ.

ಈ ಕಾರ್ಯಕ್ರಮ ಚಿಂತನಶೀಲ ಚರ್ಚೆಯನ್ನು ಉತ್ತೇಜಿಸಲು ಮತ್ತು ನಿರ್ಣಾಯಕ ಕ್ರಿಯೆಯನ್ನು ಪ್ರೇರೇಪಿಸಲು ಪ್ರಾಯೋಗಿಕ ಒಳನೋಟಗಳೊಂದಿಗೆ ಸೈದ್ಧಾಂತಿಕ ಅಡಿಪಾಯಗಳನ್ನು ಕೌಶಲಯುತವಾಗಿ ಸಂಯೋಜಿಸಿದೆ. ತಮ್ಮ ಕ್ಷೇತ್ರಗಳಲ್ಲಿ ಬದಲಾವಣೆಯ ಪ್ರವರ್ತಕರಾದ ಗೌರವಾನ್ವಿತ ನಾಯಕರಿಂದ ಸುಗಮಗೊಳಿಸಲ್ಪಟ್ಟಿದೆ, ಪರಿವರ್ತಕ ಜಗತ್ತಿನಲ್ಲಿ ಅಕಾಡೆಮಿಯ ಪಾತ್ರವನ್ನು ಮರುರೂಪಿಸುವುದು ಇದರ ಪ್ರಾಥಮಿಕ ಗುರಿ. ತಂತ್ರಜ್ಞಾನದ ಏಕೀಕರಣ, ಸಂಶೋಧನಾ ನಾವೀನ್ಯತೆ ಮತ್ತು ಸುಸ್ಥಿರ ಅಭ್ಯಾಸಗಳಂತಹ ನಿರ್ಣಾಯಕ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಶಿಕ್ಷಣದ ಭವಿಷ್ಯವನ್ನು ಪರಿಣಾಮಕಾರಿಯಾಗಿ ರೂಪಿಸಲು ಅಗತ್ಯವಾದ ಸಾಧನಗಳೊಂದಿಗೆ ನಾಯಕರನ್ನು ಸಜ್ಜುಗೊಳಿಸಲು ಕಾರ್‍ಯಕ್ರಮವನ್ನು ಅನ್ನು ನಿಖರವಾಗಿ ವಿನ್ಯಾಸಗೊಳಿಸಲಾಗಿದೆ.

FICCI ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ ಶೈಕ್ಷಣಿಕ ನಾಯಕರನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ಮತ್ತು ಪ್ರಗತಿಪರ ನೀತಿಗಳನ್ನು ಕಾರ್ಯಗತಗೊಳಿಸಲು ಅಧಿಕಾರ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದು ಅವರ ಸಂಸ್ಥೆಗಳು ಶೈಕ್ಷಣಿಕ ನಾವೀನ್ಯತೆ ಮತ್ತು ಉತ್ಕೃಷ್ಟತೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಖಚಿತಪಡಿಸುತ್ತದೆ.

1927 ರಲ್ಲಿ ಸ್ಥಾಪಿತವಾದ FICCI ಭಾರತದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಅಪೆಕ್ಸ್ ವ್ಯಾಪಾರ ಸಂಸ್ಥೆಯಾಗಿದ್ದು, ಭಾರತದ ಆರ್ಥಿಕ ಬೆಳವಣಿಗೆ ಮತ್ತು ಕೈಗಾರಿಕೀಕರಣಕ್ಕೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸರ್ಕಾರೇತರ, ಲಾಭರಹಿತ ಸಂಸ್ಥೆಯಾಗಿ, FICCI ಭಾರತದ ವ್ಯಾಪಾರ ಮತ್ತು ಉದ್ಯಮದ ಧ್ವನಿಯಾಗಿ ಇದು ಕಾರ್ಯನಿರ್ವಹಿಸುತ್ತದೆ, ಜೊತೆಗೆ ಸುಗಮ ಸಂವಾದ, ನೀತಿಯನ್ನು ಪ್ರಭಾವಿಸುವುದರೊಂದಿಗೆ ವಿವಿಧ ವಲಯಗಳಾದ್ಯಂತ ಸೇತುವೆಯನ್ನು ನಿರ್ಮಿಸುತ್ತದೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಒಂದು ಉತ್ಕೃಷ್ಟ ವಿಶ್ವವಿದ್ಯಾಲಯವಾಗಿದ್ದು, ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸಮಗ್ರ ಶೈಕ್ಷಣಿಕ ಕೊಡುಗೆಗಳಿಗೆ ಹೆಸರುವಾಸಿಯಾಗಿದೆ. ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸುವ ಮೂಲಕ, MAHE ಶೈಕ್ಷಣಿಕ ನಾಯಕತ್ವವನ್ನು ಬೆಳೆಸುವ ತನ್ನ ಬದ್ಧತೆಯನ್ನು ಶ್ರುತಪಡಿಸುವುದರೊಂದಿಗೆ ಉನ್ನತ ಶಿಕ್ಷಣ ಮತ್ತು ಅದರಾಚೆಗಿನ ಕ್ಷೇತ್ರಗಳಲ್ಲಿ ಗಮನಾರ್ಹ ಪರಿಣಾಮಗಳನ್ನು ಉಂಟುಮಾಡಿದೆ.