Header Ads Widget

ಉಡುಪಿ : ಬಲ್ಲಾಳ್ ಫೈನಾನ್ಸ್‌ ಮಾಲಕ ಮುರಳೀಧರ್ ಬಲ್ಲಾಳ್ ವಿಧಿವಶ

ಉಡುಪಿಯ ಖಾಸಗಿ ಫೈನಾನ್ಸ್ ಮಾಲಕರೊಬ್ಬರು ಹೃದಯಾಘಾತದಿಂದ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಉಡುಪಿಯ ಮಿತ್ರ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಕಾರ್ಯಾಚರಿಸುತ್ತಿದ್ದ ಬಲ್ಲಾಳ್ ಫೈನಾನ್ಸ್‌ ಮಾಲಕ, ಕಿನ್ನಿಮೂಲ್ಕಿ ಕನ್ನರ್ಪಾಡಿ ನಿವಾಸಿ ಮುರಳೀಧರ್ ಬಲ್ಲಾಳ್ (56) ಮೃತರು.

ಒಮ್ಮೆಲೆ ಕುಸಿದುಬಿದ್ದ ಇವರನ್ನು ಮನೆಯವರು ತಕ್ಷಣ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಅವರು ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ