Header Ads Widget

ನಿಹಾಲಿ ಹೆಗ್ಡೆಗೆ ಕಿಡ್ಸ್ ಕರ್ನಾಟಕ ಕಿರೀಟ

ಮೈಸೂರಿನ ಮಾಯಾಸ್ ಕಿಂಗ್ ಕೋರ್ಟ್ ಹೋಟೆಲ್ ನಲ್ಲಿ ಗಾನವಿ ಕಂಬೈನ್ಸ್ (ರಿ,) ನ ವತಿಯಿಂದ ದಿನಾಂಕ 16-02-2025 ರಂದು ಕಿಡ್ಸ್, ಮಿಸ್ಸ್ ಮತ್ತು ಮಿಸರ್ಸ್ ಕರ್ನಾಟಕ 2025 ಫ್ಯಾಷನ್ ಶೋ ನಲ್ಲಿ ಕಿಡ್ಸ್ ವಿಭಾಗದಲ್ಲಿ ಉಡುಪಿಯ ನಿಹಾಲಿ ಹೆಗ್ಡೆ ಪ್ರಥಮ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಕಿಡ್ಸ್ ವಿಭಾಗದ 'ಶೋ ಸ್ಟಾಪರ್" ಆಗಿಯೂ ಮಿಂಚಿದ್ದಾರೆ.

ಇದಲ್ಲದೇ ಕಿಡ್ಸ್ ವಿಭಾಗದಲ್ಲಿ ಮಿನಿ ಬ್ಯೂಟಿಫುಲ್ ಇನ್ ಗರ್ಲ್ಸ್ ಟೈಟಲ್ಸ್ ಬಿರುದನ್ನೂ ಪಡೆದಿದ್ದಾರೆ.

ಇವರು ಮಣಿಪಾಲದ ಮಾಧವ ಕೃಪ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿನಿ ಆಗಿದ್ದಾರೆ. 

ಸಣ್ಣ ವಯಸ್ಸಿನಲ್ಲಿಯೇ ಫ್ಯಾಷನ್ ಲೋಕದಲ್ಲಿ ಮಿಂಚಿ ಉಡುಪಿಗೆ ಕೀರ್ತಿಯನ್ನು ತಂದು ಕೊಟ್ಟಿದ್ದಾರೆ.

ನಿಹಾಲಿಯವರು ಉಡುಪಿಯ ಸಾಯಿ ಪ್ರಸಾದ್ ಹೆಗ್ಡೆ ಹಾಗೂ ಸ್ವಾತಿ ಎಸ್. ಹೆಗ್ಡೆಯವರ ಮಗಳಾಗಿದ್ದಾಳೆ.

ಇವರ ಫ್ಯಾಷನ್ ಲೋಕದ ಪಯಣ ಮುಂದುವರೆದು ಉಡುಪಿಗೆ ಇನ್ನಷ್ಟು ಕೀರ್ತಿಯನ್ನು ಹೆಚ್ಚಿಸಲಿ.