Header Ads Widget

ಹರಿಸೇವೆ ಮಾಡಲು ಬುವಿಯಲ್ಲಿ ಜನಿಸಿದ ಗುರು ಮಧ್ವಾಚಾರ್ಯರು~ ✍ ಪ್ರಶಾಂತ ಕುಮಾರ್ ಮಟ್ಟು

 


ಹರಿಯಂಶ ತಳೆದಿಹ ಮೂರನೆಯವತಾರ

ಹರಿನಾಮವನು ಸಾರಿದವರು| 

ಹರಿಸೇವೆ ಮಾಡಲು ಬುವಿಯಲ್ಲಿ ಜನಿಸಿದ 

ಗುರು ಮಧ್ವಾಚಾರ್ಯರು ಇವರು||


ಕಡಲಿನ ಮೂಲಕ ಹಡಗಲ್ಲಿ ಬಂದಿಹ 

ಕಡೆಗೋಲಿನವನ ಕಂಡವರು|

ಉಡುಪಿ ಕ್ಷೇತ್ರದಿ ಕೃಷ್ಣನಿಗೆ ಗುಡಿ ಕಟ್ಟಿದ 

ಪೊಡವಿಗೊಡೆಯನ ಭಜಕರು|| 

 

ಜ್ಞಾನದ ಚಿಲುಮೆಯು ಶರಣರ ಪೊರೆವರು 

ಆನಂದ ತೀರ್ಥ ಮುನಿಗಳು|

ಶ್ರೀನಾಥನನು ಪೂಜಿಸಲು ಬಾಲ ಯತಿಗಳ  

ತಾ ನಿಂತು ನೇಮಿಸಿದವರು||


ವರಸೃಷ್ಟಿ ದಿಟವೆಂದು ಲೋಕಕ್ಕೆ ಪೇಳಿದ

ಗುರುವಚ್ಯುತರ ಶಿಷ್ಯರಿವರು|  

ಬರೆದರು ಬ್ರಹ್ಮ ಸೂತ್ರಕೆ ಭಾಷ್ಯಗ್ರಂಥವ 

ವರಸುಪ್ರಶಾಂತ ಕೋವಿದರು||


✍  ಪ್ರಶಾಂತ ಕುಮಾರ್ ಮಟ್ಟು