ಕನ್ನಾರ್ ಸಂತೋಷ ಕುಮಾರ್ (45) , ತಂದೆ: ದಿ. ಕನ್ನಾರ್ ಶಂಕರ ಆಚಾರ್ಯ, ಉಡುಪಿ ರವರಿಗೆ ದಿನಾಂಕ:11.09.2024 ರಂದು ಯಾರೋ ಅಪರಿಚಿತರು ಕರೆಮಾಡಿ Telecom Regulatory Authority of India ದಿಂದ ಕರೆ ಮಾಡುತ್ತಿದ್ದು, ನಿಮ್ಮ ಮೊಬೈಲ್ ನಂಬ್ರವು ನಿಮ್ಮ ಹೆಸರಿನಲ್ಲಿ ಇದೆ ಈ ನಂಬ್ರದಲ್ಲಿ ಇಲ್ಲೀಗಲ್ ಅಡ್ವಟೈಸ್‌ಮೆಂಟ್ ಹಾಗೂ ಹೆರಾಸಿಂಗ್ ಟೆಕ್ಸ್ಟ್ ಮೆಸೇಜಸ್ ಆಗಿದ್ದು, ನಿಮ್ಮ ಮೇಲೆ ಒಟ್ಟು 17 ಎಫ್.ಐ.ಆರ್ ಆಗಿದ್ದು, ಇನ್ನು 2 ಗಂಟೆಯ ಒಳಗೆ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಕಾಂಟಾಕ್ಟ್ ನಂಬ್ರ ಡಿಸ್‌ಕನೆಕ್ಟ್ ಮಾಡುತ್ತೇವೆ. ನಿಮ್ಮ ಮೇಲೆ ಆರೆಸ್ಟ್ ವಾರಂಟು ಆಗಿರುತ್ತದೆ ಎಂಬುದಾಗಿ ಬೆದರಿಸಿದ್ದು ನಂತರ ವಾಟ್ಸಪ್ ವಿಡಿಯೋ ಕರೆ ಮಾಡಿದ್ದು, ಕರೆ ಮಾಡಿದ ವ್ಯಕ್ತಿಯು ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲಿದ್ದು, ಇನ್ಸಪೆಕ್ಟರ್ ಸೈಬರ್ ಅಂದೇರಿ ಈಸ್ಟ್ ಮುಂಬಾಯಿ ಎಂದು ಹೇಳಿ ಕೇಸು ಆಗಿರುವ ಬಗ್ಗೆ ಹಾಗೂ ಪಿರ್ಯಾದಿದಾರರ ಆಧಾರ್ ಕಾರ್ಡ್ ಲಿಂಕಿನಲ್ಲಿರುವ ಬ್ಯಾಂಕ್ ಅಕೌಂಟ್ ನರೇಶ್ ಗೋಯೆಲ್ ಎಂಬಾತನ ಮನಿ ಲಾಂಡ್ರಿಂಗ್ ಕೇಸ್‌ನಲ್ಲಿ ಅಕೌಂಟ್ ಇನ್‌ವಾಲ್‌ಮೆಂಟ್ ಇದೆ ಎಂದು ತಿಳಿಸಿ ಆದಾಯದ ಮೂಲ ಚೆಕ್ ಮಾಡುವುದಾಗಿ ತಿಳಿಸಿ ಪಿರ್ಯಾದಿದಾರರ ಬ್ಯಾಂಕ್ ಖಾತೆ ಹಾಗೂ ಅದರಲ್ಲಿನ ಹಣದ ವಿವರವನ್ನು ಪಡೆದು ಸದ್ರಿ ಹಣವನ್ನು ಆರ್‌ಬಿಐಯಿಂದ ಫಂಡ್ ವೆರಿಪೇಕಶನ್ ಮಾಡಲು State Bank of India ಕ್ಕೆ ಜಮಾ ಮಾಡಲು ಹೇಳಿ ಹಣದ ಬಗ್ಗೆ ಕ್ಲೀಯರ್ ಆಗುವವರೆಗೆ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿ ಪಿರ್ಯಾದಿದಾರರಿಂದ ರೂ.89,00,000/- ಹಣವನ್ನು ವರ್ಗಾಯಿಸಿರುತ್ತಾರೆ. ಈ ಬಗ್ಗೆ ಕನ್ನಾರ್ ಸಂತೋಷ ಕುಮಾರ್ ರವರು ನೀಡಿದ ದೂರಿನಂತೆ ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 67/2024 ಕಲಂ: 66 (C) 66 (D) ಐಟಿ ಕಾ̧ಯ್ದೆ 308 (6) 318 (4) BNS ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ರವರ ನೇತೃತ್ವದ ಸೆನ್ ಪೊಲೀಸ್ ಠಾಣೆಯ ಪ್ರವೀಣ ಕುಮಾರ್, ಪ್ರವೀಣ, ರಾಜೇಶ್, ಉಡುಪಿ ನಗರ ಠಾಣೆಯ ಎ.ಎಸ್.ಐ ಸುಭಾಸ್, ಪಡುಬಿದ್ರಿ ಠಾಣಾ ಎ.ಎಸ್.ಐ ರಾಜೇಶ್.ಪಿ, ದಿಕ್ಷೀತ್ , ಸುಕನ್ಯಾ ಮತ್ತು ಜ್ಯೋತಿರವರುಗಳ ತಂಡವು ಕೇರಳ ರಾಜ್ಯ ಮತ್ತು ಮಹಾರಾಷ್ಟ ರಾಜ್ಯದ ಪುಣೆ ಕಡೆಗಳಲ್ಲಿ ಕಾರ್ಯಚರಣೆ ನಡೆಸಿ ಆರೋಪಿಯಾದ ಕಿರಣ್ (24), ತಂದೆ: ಪುರು ನಾಯಕ್, ಶಹಾಪುರ್, ಯಾದಗಿರಿ ಜಿಲ್ಲೆ ರವರನ್ನು ಧಾರವಾಡದಲ್ಲಿ ದಸ್ತಗಿರಿ ಮಾಡಿ ಅವರಿಂದ 1 ಮೊಬೈಲ್ ಪೋನನ್ನು ಹಾಗೂ ರೂ. 5,00,000/- ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಹಾಗೂ ಈ ಹಿಂದೆ ಕೇರಳ ರಾಜ್ಯದ ಮೊಹಮ್ಮದ್ ನಿಶಾಮ್ ಸಿ.ಕೆ ಎಂಬವರ ಖಾತೆಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಹಣ ಜಮಾ ಆಗಿರುವ ರೂ, 2,00,000/- ನ್ನು ಸ್ವಾಧೀನ ಪಡಿಸಲಾಗಿದ್ದು, ಒಟ್ಟು ಈ ಪ್ರಕರಣದಲ್ಲಿ ರೂ, 7,00,000/- ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.