Header Ads Widget

ಶಿವಪಾಡಿ ವೈಭವ ಕಾರ್ಯಕ್ರಮಕ್ಕೆ ಮಾಹೆಯ ಸಹಕುಲಾದಿಪತಿಗಳಾದ ಡಾ.ಹೆಚ್.ಎಸ್.ಬಳ್ಳಾಲ್ ರಿಗೆ ಆಮಂತ್ರಣ

ಫೆಬ್ರವರಿ 22 ರಿಂದ 26ರವರೆಗೆ ನಡೆಯಲಿರುವ ಶಿವಪಾಡಿ ವೈಭವ ಕಾರ್ಯಕ್ರಮಕ್ಕೆ ಮಾಹೆಯ ಸಹಕುಲಾದಿಪತಿಗಳಾದ ಡಾ.ಹೆಚ್.ಎಸ್.ಬಳ್ಳಾಲ್ ರವರನ್ನು ಶಿವಪಾಡಿ ವೈಭವ ಆಚರಣಾ ಸಮಿತಿಯ ಅಧ್ಯಕ್ಷರಾದ ಕೆ ರಘುಪತಿ ಭಟ್ ರವರ ನೇತೃತ್ವದ ನಿಯೋಗದಿಂದ ಆಮಂತ್ರಿಸಲಾಯಿತು.

ಫೆಬ್ರವರಿ 22 ರಂದು ಶಿವಪಾಡಿ ವೈಭವ ಕಾರ್ಯಕ್ರಮವು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳಲಿದ್ದು ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿಕೊಳ್ಳುವಂತೆ ಡಾ.ಹೆಚ್.ಎಸ್.ಬಳ್ಳಾಲ್ ರವರಿಗೆ ಆಮಂತ್ರಿಸಲಾಯಿತು.

ನಿಯೋಗದಲ್ಲಿ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಹೇಶ್ ಠಾಕೂರ್, ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ದಿನೇಶ್ ಪ್ರಭು, ಟ್ರಸ್ಟಿಗಳಾದ ಅಶೋಕ್ ಸಾಮಂತ್, ಪ್ರಮುಖರಾದ ಡಾ.ನಾಗರಾಜ್ ಕಾಮತ್, ಮಾಹೆ ಎಸ್ಟೇಟ್ ಅಧಿಕಾರಿ ಬಾಲಕೃಷ್ಣ ಪ್ರಭು ಉಪಸ್ಥಿತರಿದ್ದರು.