ಶ್ರೀಮತಿ ಸೀತಾ ಶ್ರೀನಿವಾಸ್.ಎ ಅವರ 'ಅಮ್ಮ ಹಚ್ಚಿದ ಹಣತೆ' ಸ್ವರಚಿತ ಚೊಚ್ಚಲ ಕೃತಿ ಅನಾವರಣ ಫೆಬ್ರವರಿ 21, ಶುಕ್ರವಾರ ಅಪರಾಹ್ನ 4.00 ಗಂಟೆಗೆ ಶ್ರೀ ಶೀನಿವಾಸ್ ಅಕ್ಕಿಅಂಗಡಿ ಸದ್ಭಾವನಾ ವೇದಿಕೆ ಚರ್ಚ್‌ರೋಡ್ ಬೈಂದೂರು,ಕುಂದ ಅಧ್ಯಯನ ಕೇಂದ್ರ(ರಿ)ಶಂಕರ ಕಲಾಮಂದಿರ ಉಪ್ಪುಂದ ಇವರ ಸಹಯೋಗದಲ್ಲಿ ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಬೈಂದೂರಿನ ಶ್ರೀರಾಮ ಟ್ರಸ್ಟ್ ಅಧ್ಯಕ್ಷ ಶ್ರೀ ರಾಮಕೃಷ್ಣ ಶೇರುಗಾರ್ ಬಿಜೂರ ಅವರು ಬಿಡುಗಡೆ ಗೊಳಿಸಲಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪೂರ್ವಾಧ್ಯಕ್ಷ ಶ್ರೀ ಉಪ್ಪುಂದ ಚಂದ್ರಶೇಖರ ಹೊಳ್ಳರ ಅಧ್ಯಕ್ಷತೆಯಲ್ಲಿ ಜರಗುವ ಸಾಹಿತ್ಯ ಕಾರ್ಯಕ್ರಮದಲ್ಲಿ ಬೈಂದೂರು ವಲಯದ ಖ್ಯಾತ ಸಾಹಿತಿ ಶ್ರೀಮತಿ ವರಮಹಾಲಕ್ಷ್ಮೀ ಹೊಳ್ಳರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಬೈಂದೂರು ಕ.ಸಾ.ಪ ಘಟಕದ ಅಧ್ಯಕ್ಷ,ಪತ್ರಕರ್ತ ಅರುಣಕುಮಾರ್ ಶಿರೂರು ಇವರು ಶುಭಶಂಸನೆ ಮಾಡಲಿದ್ದಾರೆ. ಯುವ ಕವಿ, ಕಥೆಗಾರ ಮಂಜುನಾಥ ಮರವಂತೆ ಇವರು ಕೃತಿ ಪರಿಚಯ ಮಾಡಲಿದ್ದಾರೆ,ಸಾಹಿತಿ ಪುಂಡಲೀಕ ನಾಯಕ್ ನಾಯ್ಕನಕಟ್ಟೆ ಇವರು ಆಶಯ ನುಡಿಗಳನ್ನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಸಿ ಅಧ್ಯಕ್ಷರು ಶ್ರೀ ರಾಮಕ್ಷತ್ರೀಯ ಸಂಘ ಬೈಂದೂರು,ಡಾ.ಪ್ರಭಾಕರ ಹೃದ್ರೋಗ ತಜ್ಞರು ಮತ್ತು ವೈದ್ಯಾಧಿಕಾರಿ,ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು, ಶ್ರೀಧರ ಪಿ ಸಹಾಯಕ ಅರಣ್ಯಾಧಿಕಾರಿಗಳು ಮೂಡುಬಿದರೆ, ರೊ.ಗೋವಿಂದ ಎಮ್ ನಿವೃತ್ತ ಬ್ಯಾಂಕ್ ಅಧಿಕಾರಿ,ಕೆರ್ಗಾಲು. ವೆಂಕಟರಮಣ ಟೀಚರ್ ಪಡುವರಿ,ನಿವೃತ್ತ ಅಧ್ಯಾಪಕರು ಪ್ರೌಢಶಾಲಾ ವಿಭಾಗ, ಶ್ರೀಮತಿ ಗಾಯತ್ರಿ ರಾಮ ಅಧ್ಯಕ್ಷರು ಮಾತ್ರಮಂಡಳಿ ಬೈಂದೂರು, ಶ್ರೀಮತಿ ಗುಲಾಬಿ ಮರವಂತೆ ಅಧ್ಯಕ್ಷರು ರೋಟರಿ ಇನ್ನರ್ ವೀ಼ಲ್ ಬೈಂದೂರು ಭಾಗವಹಿಸುವರು, ಶಿಕ್ಷಕ ಗಣಪತಿ ಹೋಬಳಿದಾರ್ ಬೈಂದೂರು; ಸಂಚಾಲಕರು ಕುಂದ ಅಧ್ಯಯನ ಕೇಂದ್ರ ಉಪ್ಪುಂದ ಇವರು ಕಾರ್ಯಕ್ರಮ ನಿರುಪಣೆ ಮಾಡಲಿರುವರು, ಸಾಹಿತ್ಯಾಸಕ್ತರನ್ನು ಆಮಂತ್ರಿಸುತ್ತ ಲೇಖಕಿ ಶ್ರೀಮತಿ ಸೀತಾ ಶ್ರೀನಿವಾಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.