ಭಾರತೀಯ ಕಲೆಗಳು ಕೇವಲ ಆತ್ಮಾನಂದಕ್ಕಾಗಿ ಮಾತ್ರವಲ್ಲ ವಿವಿಧ ರೋಗಗಳ ನಿವಾರಣೆಗೂ ಪೂರಕವಾಗಿವೆ ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿಡಾ. ಪುಷ್ಪಾವತಿ ಹೇಳಿದರು.
ಮೈಸೂರಿನ ಪ್ರಖ್ಯಾತ ಸಂಸ್ಥೆ ನೃತ್ಯ ಗಿರಿ- ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರವು ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಿದ್ದ ಯುವ ಕಲಾವಿದೆ ತನುಶ್ರೀ ಎಸ್.ಚಿನ್ನಯ್ಯ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ನಿರಂತರ ಅಭ್ಯಾಸ ಪರಿಶ್ರಮ ಮತ್ತು ತ್ಯಾಗದಿಂದ ಮಾತ್ರ ಕಲೆಗಳು ಉಳಿಯಲು ಸಾಧ್ಯ ಇಂತಹ ಕಲಾಸಾಧಕರು ಮಾಡುವ ಕಲಾಪ್ರದರ್ಶನಗಳನ್ನು ಆಸ್ವಾದಿಸಿದಾಗ ಅನೇಕ ಒತ್ತಡಗಳು ನಿವಾರಣೆಯಾಗುತ್ತವೆ ಎಂದು ಅವರು ಹೇಳಿದರು.ಪಾಲಕರು ಮಕ್ಕಳಿಗೆ ಎಳವೆಯಲ್ಲಿಯೇ ಕಲೆ ಮತ್ತು ಸಾಹಿತ್ಯದ ಅಭಿರುಚಿಗಳನ್ನು ಮೂಡಿಸಬೇಕು . ಕಲೆಗಳಿಗೂ ಮತ್ತು ಮಾನಸಿಕ ಆರೋಗ್ಯ ಪಾಲನೆಗೂ ಅವಿನಾಭಾವ ಸಂಬಂಧವಿದೆ ಸಂಗೀತ ಮತ್ತು ನೃತ್ಯ ಕಲೆಗಳು ವಿದ್ಯಾರ್ಥಿಯ ಸಮಗ್ರ ವಿಕಸನಕ್ಕೆ ಪ್ರೇರಣೆ ನೀಡಲಿವೆ. ಈ ನಿಟ್ಟಿನಲ್ಲಿ ತನುಶ್ರೀಯಂಥ ಉದಯೋನ್ಭಮುಖ ಭರತನಾಟ್ಯ ಕಲಾವಿದೆಯನ್ನು ನಮ್ಮ ಸಂಸ್ಥೆ ಹೊಂದಿರುವುದು ವಿಶೇಷ ಎಂದರು.
ರಂಗ ಕಲಾವಿದ, ಸಿನಿಮಾ ನಟ ಮಂಡ್ಯ ರಮೇಶ್ ಮಂಡ್ಯ ರಮೇಶ್ ಮಾತನಾಡಿ ತನುಶ್ರೀ ಚಿನ್ನಯ್ಯ ಅವರಿಗೆ ಅತ್ಯುತ್ತಮ ಕಲಾಭಿವ್ಯಕ್ತಿ ಇದೆ. ಪದವಿ ಪೂರ್ಣಗೊಂಡ ನಂತರ ಅವರು ವಾಕ್ ಮತ್ತು ಶ್ರವಣ ತಜ್ಞೆ ಆಗಲಿದ್ದು ಅವರ ವೃತ್ತಿಗೆ ಭರತನಾಟ್ಯ ಮತ್ತು ಸಂಗೀತ ಪ್ರವೃತ್ತಿಗಳು ಪೂರಕವಾಗಲಿವೆ ಎಂದರು.
ಹಿರಿಯ ವಿದುಷಿ, ನೃತ್ಯ ಗಿರಿ ಸಂಸ್ಥೆ ನಿರ್ದೇಶಕಿ ಕೃಪಾ ಫಡ್ಕೆ, ಮು ಖ್ಯ ಶಿಕ್ಷಕ ಚಿನ್ನಯ್ಯ, ಅಭಿಯೋಜನಾ ಇಲಾಖೆ
ಎಫ್ ಡಿ ಸಿ ಸುಮಲತಾ ಹಾಜರಿದ್ದರು.
ಗುರುವಂದನೆ: ಇದೇ ಸಂದರ್ಭ ಹಿರಿಯ ವಿದುಷಿಯರಾದ ಡಾ. ಆರ್.ಎನ್. ಶ್ರೀಲತಾ, ಡಾ. ಕೃಪಾ ಫಡ್ಕೆ ಅವರಿಗೆ ಗುರುವಂದನೆ ಸಮರ್ಪಣೆ ನೆರವೇರಿತು.
ತನುಶ್ರೀ ರಂಗಪ್ರವೇಶಕ್ಕೆ ವಿದ್ವಾಂಸರಾದ ಪೂಜಾ ಸುಗಂ ನಟವಾಂಗ, ಆರ್. ರಾಜೀವ್ ಗಾಯನ, ಜಿ.ಎಸ್. ನಾಗರಾಜ್ ಮೃದಂಗ ಮತ್ತು ಎ.ಪಿ. ಕೃಷ್ಣಪ್ರಸಾದ್ ಕೊಳಲು ವಾದನದ ಹಿಮ್ಮೇಳ ಸಹಕಾರ ನೀಡಿದರು.ನೂರಾರು ಕಲಾ ರಸಿಕರು ಮತ್ತು ಕಲಾ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಯುವ ಕಲಾವಿದೆ ತನುಶ್ರೀ ಚಿನ್ನಯ್ಯ ಭರತನಾಟ್ಯ ಪ್ರಸ್ತುತಿ.
ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಯುವ ಕಲಾವಿದೆ ತನುಶ್ರೀ ಚಿನಯ್ಯ ಅವರ ರಂಗ ಪ್ರವೇಶ ಕಾರ್ಯಕ್ರಮವನ್ನು ಚಿತ್ರನಟ ಮತ್ತು ರಂಗ ಕಲಾವಿದ ಮಂಡ್ಯ ರಮೇಶ್ ಉದ್ಘಾಟಿಸಿದರು. ಖ್ಯಾತ ವಿದುಷಿ ಡಾ. ಕೃಪಾ ಫಡ್ಕೆ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ. ಪುಷ್ಪಾವತಿ, ವಿದುಷಿ ಡಾ. ಆರ್ ಎನ್ . ಶ್ರೀಲತಾ, ಮುಖ್ಯ ಶಿಕ್ಷಕ ಚಿನ್ನಯ್ಯ ಮತ್ತು ಸುಮಲತಾ ಹಾಜರಿದ್ದರು.