ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಶನ್ ನ ವತಿಯಿಂದ ಫೆಬ್ರವರಿ 14 ರಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನ ಹಿರಿಯ ಕಾರ್ಯಾಧಿಕಾರಿ ಚೆನ್ನೈ ನ ಶ್ರೀ ಬದ್ರಿನಾರಾಯಣನ್ ರವರಿಂದ ಷೇರು ಮಾರುಕಟ್ಟೆ ಅವಲೋಕನ ಮತ್ತು ವೃತ್ತಿ ಬೆಳವಣಿಗೆಯ ಕುರಿತಾಗಿ ಮಾಹಿತಿ ಕಾರ್ಯಕ್ರಮ ಜರಗಿತು.
ಅವರು ಮಾತನಾಡುತ್ತಾ ಹಣ ಗಳಿಸಲು ಬುದ್ಧಿಯಿಂದ ಯೋಚಿಸ ಬೇಕೇ ಹೊರತು ಮನಸ್ಸಿಂದ ಅಲ್ಲ, ನಾವು ಯಾವುದಕ್ಕೆ ಹಣ ಖರ್ಚು ಮಾಡುತ್ತೇವೋ ಅದು ನಮಗೆ ವಾಪಾಸು ಸಿಗುವಂತಿರಬೇಕು ಎಂದು ಅವರ ಸ್ವ ಉದಾಹರಣೆಯ ಮುಖೇನ ತಿಳಿಸಿ, ಭಾರತದ ಅರ್ಥ ವ್ಯವಸ್ಥೆಯ ನಾಲ್ಕು ಹೃದಯಗಳಾದ ಆರ್ ಬಿ ಐ, ಸೆಬಿ, ಐ ಆರ್ ಡಿ ಎ ಮತ್ತು ಪಿ ಎಫ್ ಆರ್ ಡಿ ಎ ಇಲ್ಲಿ ನಿಮ್ಮ ಉದ್ಯೋಗ ಗಳಿಸಿ ಭವಿಷ್ಯ ರೂಪಿಸುವ ಅವಕಾಶಗಳನ್ನು ತಿಳಿಸಿದರು, ಆದಷ್ಟು ಶೀಘ್ರವಾಗಿ ಹಣ ದ್ವಿಗುಣವಾಗುವ ಕ್ಷೇತ್ರದ ಮೇಲೆ ಹೂಡಿಕೆ ಮಾಡಿ ಎಂದು ಪದವಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಆಶಾ ಕುಮಾರಿ ಉಪಸ್ಥಿತರಿದ್ದರು.
ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ ಜಿ ಕಾರ್ಯಕ್ರಮ ಸಂಯೋಜಿಸಿದರು.
ಸನ್ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.