Header Ads Widget

ಶಾರ್ಜಾ ಅಂತರಾಷ್ಟ್ರೀಯ ಕ್ರಿಕೆಟ್ ಅಂಗಣದಲ್ಲಿ ವಿಠಲ ನಾಯಕರಿಗೆ ಅಭಿನಂದನೆ

ಅರಬ ಸಂಯುಕ್ತ ರಾಷ್ಟ್ರದ ದುಬೈನಲ್ಲಿ ಕಳೆದ ಒಂದೂವರೆ ದಶಕದಿಂದ ಕ್ರಿಕೆಟ್ ಆಟದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಕುಂದಾಪುರ ಸೂರಾಲಿನ ವಿಠಲ ರಿಶಾನ್ ನಾಯಕರಿಗೆ ಶಾರ್ಜಾದ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ವಿಶೇಷ ಅಭಿನಂದನಾ ಸಮಾರಂಭವು ಜರಗಿತು.

ದುಬೈನ ಪ್ರಸಿದ್ಧ ಕ್ರಿಕೆಟ್ ತಂಡಗಳಾದ ಟೆಕ್ನೋ-ಟೈಟಾನ್ಸ್,ಟೆಕ್ನೋ-ಕ್ರಿಕೆಟರ್ಸ್,ಟೆಕ್ನೋ-ವಾರಿಯರ್ಸ್ ತಂಡಗಳಿಗೆ ನಾಯಕನಾಗಿ ಹಾಗೂ ವಿದ್ವಾರ್ಸ್ ಬಾಯ್ಸ್ ಮಂಗಳೂರು ತಂಡಕ್ಕೆ ಮಾರ್ಗದರ್ಶಕರಾಗಿ ಉತ್ಕೃಷ್ಟ ಯಶಸ್ಸು ಫಲಿತಾಂಶದ ಜೊತೆಗೆ ಹಲವಾರು ಟ್ರೋಫಿಗಳನ್ನು ಮುಡಿಗೇರಿಸಿಕೊಳ್ಳುವಲ್ಲಿ ವಿಠಲ ನಾಯಕ್ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದರು.

ಈ ಪ್ರಯುಕ್ತ ಫೆಬ್ರವರಿ ಹದಿನಾರರ ಸಂಜೆ ದುಬೈನ ಸ್ಥಳೀಯ ಕ್ರಿಕೆಟ್ ಸಂಘ ಸಂಸ್ಥೆಗಳು ಹಾಗೂ ಯುನೈಟೆಡ್ ಕಾಪು ಟ್ರೋಫಿಯ ಸಂಘಟಕರಾದ ಶ್ರೀಫೈಜಲ್,ಶ್ರೀಶಫಿ,ಶ್ರೀಆಶಿಕ್ ಬಾಯ್,ಶ್ರೀಆದಿಲ್,ಶ್ರೀಶಕೀರ್ ಬಾಯ್ ನೇತೃತ್ವದಲ್ಲಿ ವಿಠಲ ನಾಯಕರಿಗೆ ಫಲಪುಷ್ಪ ನೀಡಿ ಶಾಲು ಹೊದೆಸಿ ಬೆಲೆಬಾಳುವ ಅಮೂಲ್ಯ ಸ್ಮರಣಿಕೆಯೊಂದಿಗೆ ತುಂಬು ಹೃದಯದ ಅಭಿನಂದನೆಯನ್ನು ಬಹು ವಿಜೃಂಭಣೆಯಿಂದ ಸಲ್ಲಿಸಲಾಯಿತು.

ಈ ಸಮಾರಂಭದಲ್ಲಿ ಡಾಕ್ಟರ್ ಊರಾಳ್ಸ್ ವೇರಿಕೋಸ್ ವೆಯಿನ್ಸ್ ಆಯುರ್ವೇದಿಕ್ ಕೇರನ ಮುಖ್ಯಸ್ಥರು ಹಾಗೂ ನೂರಾರು ಕ್ರೀಡಾಭಿಮಾನಿಗಳು ನೆರೆದಿದ್ದರು.