Header Ads Widget

ಉಡುಪಿ: ದ್ವಿಚಕ್ರ ವಾಹನಗಳ ಮಧ್ಯೆ ಮುಖಾಮುಖಿ ಡಿಕ್ಕಿ; ಓರ್ವ ಸಾವು!

ಉಡುಪಿ: ಅಜ್ಜರಕಾಡು ಅಗ್ನಿಶಾಮಕ ಕೇಂದ್ರದ ಎದುರು ಎರಡು ದ್ವಿಚಕ್ರ ವಾಹನಗಳ ಮಧ್ಯೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಎರಡು ದಿನಗಳ ಹಿಂದೆ ವಿದೇಶದಿಂದ ಆಗಮಿಸಿದ್ದ ವ್ಯಕ್ತಿ ಮೃತಪಟ್ಟಿದ್ದು, ಇನ್ನೊಂದು ಬೈಕಿನಲ್ಲಿದ್ದ ವ್ಯಕ್ತಿ ತೀವ್ಯ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಸೋಮವಾರ ರಾತ್ರಿ ಘಟಿಸಿದೆ.

ಮೃತ ವ್ಯಕ್ತಿಯನ್ನು ಉಡುಪಿ ಮಿಷನ್ ಆಸ್ಪತ್ರೆ ಬಳಿ ನಿವಾಸಿ ಸ್ಯಾಮ್‌ವೆಲ್ ಸದಾನಂದ ಕರ್ಕಡ (59) ಎಂದು ಗುರುತಿಸಿದ್ದು, ಅವರು ಎರಡು ದಿನಗಳ ಹಿಂದೆಯಷ್ಟೇ ವಿದೇಶದಿಂದ ಆಗಮಿಸಿದ್ದರು.

ಮತ್ತೋರ್ವ ದ್ವಿಚಕ್ರ ಸವಾರನ್ನು ಉಡುಪಿ ಜಯಲಕ್ಷ್ಮೀ ಸಂಸ್ಥೆಯ ಉದ್ಯೋಗಿ ಪವನ್ ಎಂದು ಗುರುತಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.