ಮಣಿಪಾಲ, ಫೆ. 24: ಉಡುಪಿ- ಮಣಿಪಾಲದಲ್ಲಿ ನಗರದಲ್ಲಿ ಕ್ಲಪ್ತ ಸಮಯದಲ್ಲಿ ಗುಣ ಮಟ್ಟದ ವಸತಿ ಸಮುಚ್ಚಯಗಳನ್ನು ನಿರ್ಮಿಸುವ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ಹೆಸರು ಗಳಿಸಿದ ಅರ್ಚನಾ ಪ್ರೊಜೆಕ್ಟ್ ಸಂಸ್ಥೆಯ ಪ್ರತಿಷ್ಠಿತ 25ನೇ ಯೋಜನೆಯಾಗಿ ಮಣಿಪಾಲ-ಅಲೆವೂರು ಮುಖ್ಯರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಲಕ್ಸುರಿ 2 ಮತ್ತು 3 ಬಿಎಚ್ಕೆ ವಸತಿ ಸಮುಚ್ಚಯ “ಅರ್ಚನಾಗ್ರಾಂಡ್ ಕನಕ್‘ಗೆ. ರವಿವಾರ ಭೂಮಿಪೂಜೆ ನೆರವೇರಿತು. ಸಭೆಯನ್ನು ಉದ್ಘಾಟಿಸಿ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಿದ ಮಾಹೆ ವಿ.ವಿ. ಸಿಒಒ ಡಾ। ರವಿರಾಜ್ ಎನ್. ಸೀತಾರಾಮ್ ಮಾತನಾಡಿ, ಪ್ರತಿಯೊಬ್ಬರಿಗೂ ಜೀವನದಲ್ಲಿ ಸ್ವಂತ ಸೂರನ್ನು ಹೊಂದಬೇಕೆನ್ನುವ ಮಹದಾಸೆ ಇದ್ದೇ ಇರುತ್ತದೆ. ಆದರೆ ಹಲವಾರು ಕಾರಣಗಳಿಂದ ಎಲ್ಲರಿಗೂ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ. ಅಂತಹವರಿಗೆ ಅನುಕೂಲವಾಗುಂತೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿಕೊಂಡು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮನೆ ನಿರ್ಮಿಸಿ ಕೈಗೆಟಕುವ ಬೆಲೆಯಲ್ಲಿ ಒದಗಿಸಿ ಕೊಡುವ ಅರ್ಚನಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಉಡುಪಿ ಎಸಿಸಿಇಎ ಅಧ್ಯಕ್ಷ ಯೋಗೀಶ್ಚಂದ್ರಧರ ಅವರು, 24 ವಸತಿ ಸಮುಚ್ಚಯಗಳನ್ನು ನಿರ್ಮಿಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗುವುದು ಸುಲಭದ ಮಾತಲ್ಲ. ಗುಣಮಟ್ಟದ ವಸತಿಗೃಹಗಳನ್ನು ನೀಡಿದಾಗ ಗ್ರಾಹಕರ ವಿಶ್ವಾಸ ಗಳಿಸಲು ಸಾಧ್ಯ. ಅಂತಹ ಕೆಲಸವನ್ನು ಈ ಸಂಸ್ಥೆ ಮಾಡಿ ತಾನು ಬೆಳವಣಿಗೆ ಹೊಂದುವುದರೊಂದಿಗೆ ತನ್ನ ಜತೆಯಲ್ಲಿರುವ ಸರ್ವರನ್ನೂ ‘ಬೆಳೆಸುತ್ತಿರುವುದು ಸ್ತುತ್ಯರ್ಹ ಎಂದು ತಿಳಿಸಿದರು.
ರೋಟರಿ ಮಾಜಿ ಗವರ್ನರ್ – ರಾಜಾರಾಮ ಭಟ್, ಜಿ.ಪಂ. ಮಾಜಿ ಅಧ್ಯಕ್ಷ ಉಪೇಂದ್ರನಾಯಕ್, ಉದ್ಯಮಿ ಕಾರ್ತಿಕ್ ಶೆಟ್ಟಿ ಶುಭ ಹಾರೈಸಿದರು. ವಿವಿಧ ಧಾರ್ಮಿಕ ಪ್ರಕ್ರಿಯೆ ಗಳೊಂದಿಗೆ ಪುರೋಹಿತ ವಿ। ಶಿವಾನಂದ ಭಟ್ ಪೌರೋಹಿತ್ಯದಲ್ಲಿ ಭೂಮಿಪೂಜೆ ನೆರವೇರಿತು. ವಿನುತಾ ಕನಕದಾಸ್ ಶೆಟ್ಟಿ ಪುಣೆ, ಸಂಸ್ಥೆಯ ಆಡಳಿತ ಪಾಲುದಾರರಾದ ಡಾ| ಅರವಿಂದ ನಾಯಕ್ ಅಮ್ಮುಂಜೆ, ಅಶ್ವಿನಿ ಅರವಿಂದ್, ಅವನಿ ಅಮಿತ್, ಆರೋಶ್, ಅಹನಾ ಉಪಸ್ಥಿತರಿದ್ದರು. ಶಿಕ್ಷಕ ಪ್ರಶಾಂತ ಶೆಟ್ಟಿ ಹಾವಂಜೆ, ರೇಖಾ ಪೈ ನಿರೂಪಿಸಿದರು. ಪಾಲುದಾರ ಮತ್ತು ಎಂಜಿನಿಯರ್ ಅಮಿತ್ ಅರವಿಂದ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರವಿರಾಜ್ ಕೆ.ಎಸ್. ವಂದಿ ಸಿದರು.
ವಿಶೇಷ ಆಫರ್:- ಭೂಮಿ ಪೂಜೆ ಪ್ರಯುಕ್ತ ಮಾ. 8ರ ತನಕ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ವಿಶೇಷ ಆಫರ್ ನೀಡಲಾಗುವುದು.2 ಬಿಎಚ್ ಕೆವಸತಿಗೃಹದಲ್ಲಿ 1,335ರಿಂದ 1425 ಚ.ಅಡಿ ಹಾಗೂ 3 ಬಿಎಚ್ಕೆ ವಸತಿಗೃಹದಲ್ಲಿ 1,695ರಿಂದ 2,195 ಚ.ಅಡಿ ವಿಸ್ತೀರ್ಣ ಇರಲಿದೆ. ಡಿಸೆಂಬರ್ನಲ್ಲಿ ಉದ್ಘಾಟನೆಗೊಳ್ಳಲಿರುವ ಸಂಸ್ಥೆಯ 24ನೇ ಯೋಜನೆ ಅರ್ಚನಾ ಸಿಗ್ನೆಚರ್ ವಸತಿ ಸಮುಚ್ಚಯದಲ್ಲಿ ಕೇವಲ 9 ಫ್ಲ್ಯಾಟ್ ಗಳು ಮಾತ್ರ ಲಭ್ಯವಿದೆ. ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ www. archanaprojects. com ಅನ್ನು ಸಂಪರ್ಕಿಸಬಹುದು