Header Ads Widget

ಮಹಾಕುಂಭಮೇಳಕ್ಕೆ ಡಿ.ಕೆ.ಶಿ!!

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಫೆ.9ರಂದು ಪ್ರಯಾಗ್ರಾಜ್ಗೆ ತೆರಳಲಿದ್ದು, ಎರಡು ದಿನ ಸಂಗಮದಲ್ಲಿ ಸ್ನಾನ ಮಾಡಲಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ಸಚಿವ ಸುರೇಶ್ ಖನ್ನಾ ಅವರು ಬೆಂಗಳೂರಿಗೆ ಆಗಮಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಕುಂಭಮೇಳಕ್ಕೆ ಆಗಮಿಸುವಂತೆ ವಿಶೇಷ ಆಹ್ವಾನ ನೀಡಿದ್ದರು.

ಇದೀಗ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ಕುಂಭ ಮೇಳಕ್ಕೆ ತೆರಳುತ್ತಿದ್ದಾರೆ. ಇದೇ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಗಂಗೆಯಲ್ಲಿ ಮಿಂದ ತಕ್ಷಣ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಪಗಳೆಲ್ಲ ಕಳೆದುಹೋಗುತ್ತಾ? ಕುಂಭ ಮೇಳದಲ್ಲಿ ಅವರು ಪುಣ್ಯಸ್ನಾನ ಮಾಡಿದ ತಕ್ಷಣ ಕರ್ನಾಟಕದಲ್ಲಿ ಬಡತನ ನಿಮೂಲನೆ ಆಗುತ್ತಾ? ಹೀಗಂತ ಈಗ ಖರ್ಗೆ ಸಾಹೇಬರು ಪ್ರಶ್ನೆ ಮಾಡಲ್ವಾ? ಎಂದು ತಿವಿದಿದ್ದಾರೆ.