ಭಾರತೀಯ ಸ್ಟೇಟ್ ಬ್ಯಾಂಕ್ ಪಿಂಚಣಿದಾರರ ಸಂಘ ಉಡುಪಿ ಇದರ ವತಿಯಿಂದ ಇತ್ತೀಚಿಗೆ ಭಾರತೀಯ ಸ್ಟೇಟ್ ಬ್ಯಾಂಕ್, ಮೈತ್ರಿ ಕಾಂಪ್ಲೆಕ್ಸ, ಉಡುಪಿಯಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಈ ಸಂದರ್ಭದಲ್ಲಿ 70 ಹಾಗೂ 80 ವರ್ಷ ಮೇಲ್ಪಟ್ಟ ಹಿರಿಯ ಪಿಂಚಣಿದಾರರನ್ನು ಗೌರವಿಸಿ ಸನ್ಮಾನಿಸ ಲಾಯಿತು.
ಉಡುಪಿ ಪಿಂಚಣಿದಾರರ ಸಂಘದ ಅಧ್ಯಕ್ಷರಾದ ಶ್ರೀ ವಿಠಲ್ ಶೆಟ್ಟಿಗಾರ್ ರವರು ಸರ್ವರನ್ನು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದರು. ಶ್ರೀ ರಮೇಶ್ ರಾವ್, ಅಧ್ಯಕ್ಷರು, ಪಿಂಚಣಿದಾರರ ಸಂಘ,ಬೆಂಗಳೂರು ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪಿಂಚಣಿದಾರರ ನ್ಯಾಯಯುತ ಬೇಡಿಕೆಗಳ ಹಾಗೂ ಅದರ ಈಗಿನ ಸ್ಥಿತಿ ಗತಿಗಳ ಬಗ್ಗೆ ಸವಿವಾರವಾಗಿ ತಿಳಿಯಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಇದರ ಪ್ರಾದೇಶಿಕ ಕಚೇರಿಯ ಮುಖ್ಯ ವ್ಯವಸ್ಥಾಪಕ ರಾದ ಶ್ರೀ ಕೃಷ್ಣರಾಜ ಭಟ್, ಉಡುಪಿ, ಪಿಂಚಣಿದಾರರ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಕೆ.ಎಮ್ .ಶೆಟ್ಟಿಗಾರ್, ಪಿಂಚಣಿದಾರರ ಸಂಘ, ಬೆಂಗಳೂರು ಇದರ ಉಪಾಧ್ಯಕ್ಷ, ಶಂಕರ್ ಎನ್ ನಾಯಕ್, ಕೋಶಾಧಿಕಾರಿ ಶ್ರೀ ಏನ್. ಮನೋಹರ್ ರಾವ್, ಶ್ರೀ ಸುಕುಮಾರ್ ಹೆಗ್ಡೆ ಹಾಗೂ ಇತರರು ಕಾರ್ಯಕ್ರಮ ದಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ಆರೋಗ್ಯ ನಿಮ್ಮ ಅಂಗೈಯಲ್ಲಿ ಈ ವಿಚಾರವಾಗಿ ಕೆ. ನಾರಾಯಣ ಆಚಾರ್ಯ, ಅಧ್ಯಾಪಕರು, ರೇಖಿ ಮತ್ತು ಆಕ್ಯುಪ್ರೆಶರ್ ಅವರು ಆರೋಗ್ಯ ನಮ್ಮ ಅಂಗೈಯಲ್ಲೆ ಇದೆ ಅದನ್ನು ಹೇಗೆ ಯಾವ ರೀತಿಯಲ್ಲಿ ನಾವು ಉಪಯೋಗಿಸಿ ಆರೋಗ್ಯವಂತರಾಗಬಹುದು ಎಂಬುದರ ಬಗ್ಗೆ ಸವಿವರ ವಾಗಿ ತಿಳಿಸಿದರು.
ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅತಿಥಿಗಳಾದ ಶಂಕರ್ ನಾಯಕ್, ಕೆ.ಎಂ. ಶೆಟ್ಟಿಗಾರ್ ಅವರು ಸಂದರ್ ರ್ಭೋಚಿತವಾಗಿ ಮಾತನಾಡಿದರು.
ಶ್ರೀಮತಿ ವಸಂತಿ ರತ್ನಾಕರ 2025- 27ರ ಸಾಲಿಗೆ ಆಯ್ಕೆಯಾದ ಹೊಸ ಕಾರ್ಯಕಾರೀ ಸಮಿತಿಯ ಪಟ್ಟಿಯನ್ನು ವಾಚಿಸಿದರು ಅಧ್ಯಕ್ಷರಾಗಿ ಶ್ರೀ ವಿಟ್ಟಲ್ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಕಾಂತ ಕೆ.ಎನ್, ಕೋಶಾಧಿಕಾರಿಯಾಗಿ ಶಿವದಾಸ್ ಹಾಗೂ 10 ಜನ ಕಾರ್ಯಕಾರೀ ಸಮಿತಿಯ ಸದಸ್ಯರ ಪಟ್ಟಿಯನ್ನು ವಾಚಿಸಿ, ಸಭೆಯಲ್ಲಿ ಅನುಮೋದಿಸಲ್ಪಟ್ಟಿತು.
ಶ್ರೀಮತಿ ಪ್ರತಿಭಾ ಆಚಾರ್ಯರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು, ಕೆ.ಸಿ.ಶೆಣೈ ಅವರು ವಂದಿಸಿದರು, ಶ್ರೀ ಹರೀಶ್ ರವರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಚಂದ್ರಕಾಂತ ಕೆ . ಎನ್., ಶಿವಶಂಕರ್, ಭಾಸ್ಕರ್ ಶೆಟ್ಟಿಗಾರ್, ಮಾಧವ ಸಾಮಕ್ ಹಾಗೂ ಇತರ ಗಣ್ಯರು ಹಾಜರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.