Header Ads Widget

​ಕೊಡವೂರು ಶಂಕರನಾರಾಯಣ ದೇವಸ್ಥಾನ :ಫೆ. 14: ಶ್ರೀಮನ್ಮಹಾರಥೋತ್ಸವ

ಮಲೈ ಫೆ 10: ಕೊಡವೂರು ಮಹತೋಭಾರ ಶ್ರೀ ಶಂಕರನಾರಾ ಯಣ ದೇವಸ್ಥಾನದ ಶ್ರೀ ಮನ್ಮಹಾರ ಥೋತ್ಸವ, ಮಹಾರಂಗಪೂಜೆ ಮತ್ತು ಢಕ್ಕೆಬಲಿ ಸಹಿತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯ ಕ್ರಮಗಳು ಫೆ 9​ ರಂದು ಆರಂಭಗೊಂಡಿದ್ದು, 17ರ ವರೆಗೆ ನಡೆಯಲಿದೆ.



ಧಾರ್ಮಿಕಪ್ರಕ್ರಿಯೆಗಳುದೇಗುಲದ ಪ್ರಧಾನ ತಂತ್ರಿ ವೇ। ಪುತ್ತೂರು ಹಯವದನ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು, ಫೆ. 11ರಂದು ರಾತ್ರಿ 7.30ರಿಂದ ಬಲಿ, ಓಲಗ ಮಂಟಪ ಪೂಜೆ, ಅಂಕುರಾರೋಹಣ, ಫೆ 12ರಂದು ಸಂಜೆ 4.30ರಿಂದ ಕಾನಂಗಿ ರಾಯರ ಮನೆಯಿಂದ ಹೂ-ಕಾಯಿ ಮೆರವಣಿಗೆ, ರಾತ್ರಿ ಅಟ್ಟೆಬಲಿ, ಚಂದ್ರಮಂಡ​ ಲೋತ್ಸವ, ಮಹಾರಂಗಪೂಜೆ, ಭೂತ ಬಲಿ​, ಸೇವೆಯು ಜರಗಲಿರುವುದು. ಫೆ. 13ರಂದು ಸಂಜೆ 4ರಿಂದ ಪೀಠ ಪೂಜೆ, ರಾತ್ರಿ ಬಲಿ, ಗ್ರಾಮ ಕಟ್ಟೆಪೂಜೆ ನಡೆಯಲಿರುವುದು.



ಫೆ. 14ರಂದು ಬೆಳಗ್ಗೆ 11ಕ್ಕೆ ರಥಾರೋಹಣ, ಮಧ್ಯಾಹ್ನ 12.30 ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ರಿಂದ ಮಹಾರಥೋತ್ಸವ, ದರ್ಶನ ಸೇವೆ, ಹೂವಿನ ವಿಶೇಷ ಅಲಂಕೃತ ಪಲ್ಲಕ್ಕಿ ಉತ್ಸವ, ಓಲಗ ಮಂಟಪ ಪೂಜೆ, ತೊಟ್ಟಿಲೋತ್ಸವ, ಭೂತಬಲಿ, ಶಯನೋತ್ಸವ, ಕವಾಟ ಬಂಧನ ನಡೆ ಯಲಿದೆ.



15ರಂದು ಬೆಳಗ್ಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಧ್ಯಾಹ್ನ ಕಟ್ಟೆಪೂಜೆ, ಸಂಜೆ ಕೆರೆಮಠ ಸರೋವರದಲ್ಲಿ ತೆಪ್ಪೋತ್ಸವ ಅವಭ್ರಥ, ಫೆ. 16ರಂದು ಬೆಳಗ್ಗೆ 8ಕ್ಕೆ ಗಣಹೋಮ, ಸಂಪ್ರೋಕ್ಷಣೆ, ಶ್ರೀ ವರಮಹಾಲಕ್ಷ್ಮೀ ಪೂಜೆ, ಮಹಾಮಂತ್ರಾಕ್ಷತೆ ಹಾಗೂ ಫೆ. 17ರಂದು ಬೆಳಗ್ಗೆ 9ಕ್ಕೆ ನಾಗಬನದಲ್ಲಿ ಆಶ್ಲೇಷಾ ಬಲಿ, ರಾತ್ರಿ 7ಕ್ಕೆ ಹಾಲಿಟ್ಟು ಸೇವೆ ಮತ್ತು ಬ್ರಹ್ಮ ಮಂಡಲ ಢಕ್ಕೆಬಲಿ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.