Header Ads Widget

ಎರಡು ಗಂಟೆ ಅವಧಿಯಲ್ಲಿ ಐವರ ಮರ್ಡರ್

 

ತಿರುವನಂತಪುರಂ: ಕೇರಳದಲ್ಲಿ ಪೆರುಮಳದಲ್ಲಿ ಭೀಕರ ಹತ್ಯಾಕಾಂಡ ನಡೆದಿದೆ. ಮನೆಯ ಮಗ ನಿಂದಲೇ ಕುಟುಂಬಸ್ಥರ ಭೀಕರ ಕೊಲೆಯಾಗಿದೆ. 23 ವರ್ಷದ ಅಫನ್ ಎಂಬ ಯುವಕ ಘೋರ ಕೃತ್ಯ ಎಸಗಿ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾರೆ. ಅಫನ್ ಆಕ್ರೋಶಕ್ಕೆ ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ಸೋದರ, ಗೆಳತಿ ಪ್ರಾಣ ಕಳೆದುಕೊಂಡಿದ್ದರೆ, ತಾಯಿಯ ಮೇಲೂ ಹಲ್ಲೆಗೈದು ಕೊಲ್ಲಲು ಪ್ರಯತ್ನಿಸಿದ್ದ.


ತೀವ್ರವಾಗಿ ಗಾಯಗೊಂಡಿರುವ ತಾಯಿ ಶಮಿ ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿ ದ್ದಾರೆ. ಮೊದಲು 88 ವರ್ಷದ ಅಜ್ಜಿ ಸಲ್ಮಾ ಬೀವಿ ಮನೆಗೆ ತೆರಳಿದ್ದ ಅಫಾನ್ ಆಕೆಯನ್ನು ಮನೆ ಯಲ್ಲಿಯೇ ಕೊಚ್ಚಿ ಕೊಚ್ಚಿ ಕೊಂದಿದ್ದಾನೆ. ಅಲ್ಲಿಂದ ಚಿಕ್ಕಪ್ಪನ ಮನೆಗೆ ಹೋಗಿ ಚಿಕ್ಕಪ್ಪ, ಚಿಕ್ಕಮ್ಮ ನನ್ನೂ ಕೊಚ್ಚಿ ಕೊಲೆ ಮಾಡಿದ್ದಾನೆ. ಆ ಬಳಿಕ ತನ್ನ ಮನೆಗೆ ಬಂದಿದ್ದ ಅಫಾನ್ 9 ತರಗತಿ ಓದುತ್ತಿದ್ದ 14 ವರ್ಷದ ತಮ್ಮನನ್ನು ಹತ್ಯೆ ಮಾಡಿದ್ದ. 


ತಪ್ಪಿಸಲು ಬಂದ ತಾಯಿ ಶೆಮಿ ಹಾಗೂ ಗೆಳತಿ ಫರ್ಸಾನಾ ಮೇಲೂ ದಾಳಿ ಮಾಡಿದ್ದಾನೆ. ಈ ಭೀಕರ ದಾಳಿಗೆ ಗೆಳತಿಯೂ ಮೃತಪಟ್ಟಿದ್ದು, ತಾಯಿಗೆ ಗಂಭೀರ ಗಾಯವಾಗಿದೆ. ಐವರನ್ನು ಕೊಂದಬಳಿಕ ಪೊಲೀಸ್ ಠಾಣೆಗೆ ತೆರಳಿ ಅಫಾನ್ ತಪ್ರೊಪ್ಪಿಕೊಂಡಿದ್ದು, ಅಜ್ಜಿಯ ಒಡವೆಗಳಿಗಾಗಿ ಕೇಳಿದ್ದೆ. ಆಕೆ ಕೊಡದಿದ್ದಕ್ಕೆ ಹತ್ಯೆಗೈದೆ ಎಂದು ಹೇಳಿದ್ದಾರೆ. ಹಣಕಾಸು ನೆರವು ನೀಡದ ಕಾರಣಕ್ಕಾಗಿ ಕುಟುಂಬದವರ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.


ತಿರುವನಂತಪುರ ಬಳಿಯ ವೆಂಜರಮೂಡು ಬಳಿ ಈ ಘಟನೆ ನಡೆದಿದ್ದು, ಕೇವಲ 2 ಗಂಟೆಯ ಅವಧಿ ಯಲ್ಲಿ ಐದು ಮಂದಿಯ ಕೊಲೆ ನಡೆದಿದ್ದು, ಇದನ್ನು ಮಾಡುವ ಸಲುವಾಗಿ ಅಫಾನ್ ಅಂದಾಜು 34 ಕಿಲೋಮೀಟರ್‌ಗಳ ಪ್ರಯಾಣ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ 14 ವರ್ಷದ ಸಹೋದರ ಅಫ್ಘಾನ್ ಮೃತದೇಹದ ಬಳಿ ₹500 ನೋಟುಗಳು ಚದುರಿ ಬಿದ್ದಿರೋದು ಸೇರಿದಂತೆ ಗೊಂದಲದ ವಿವರಗಳು ಹೊರಬಂದಿವೆ.


ಆರ್ಥಿಕ ಸಂಕಷ್ಟ ಮತ್ತು ವೈಯಕ್ತಿಕ ಘರ್ಷಣೆಗಳು ಈ ಹತ್ಯಾಕಾಂಡಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.