Header Ads Widget

ಬಸ್‌ನಿಂದ ಬಿದ್ದು ಪಿಯು ವಿಧ್ಯಾರ್ಥಿ ಸಾವು!

ವಿದ್ಯಾರ್ಥಿಯೊಬ್ಬ ನಗರ ಸಾರಿಗೆ ಬಸ್‌ನಿಂದ ಬಿದ್ದು  ಸಾವನ್ನಪ್ಪಿದ ದಾರುಣ ಘಟನೆ ಶಿವಮೊಗ್ಗ ನಗರದ ಮೈಲಾರೇಶ್ವರ ದೇವಾಲಯದ ಬಳಿ ಸಂಭವಿಸಿದೆ. ಗುರುಪುರದಿಂದ ಆತ ಸಿಟಿಯಲ್ಲಿನ ಕಾಲೇಜಿಗೆ ಬರುವಾಗ ಈ ಘಟನೆ ಸಂಭವಿಸಿದೆ.

ಪ್ರಥಮ ಪಿಯು ಕಾಮರ್ಸ್ ವಿದ್ಯಾರ್ಥಿ ಯಶವಂತ್ (17) ಮೃತ ವಿದ್ಯಾರ್ಥಿ. ಈತ ನಗರ ಸಾರಿಗೆ ಬಸ್‌ನಲ್ಲಿ ಪುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸುತ್ತಿದ್ದ. ಸಿಟಿ ಬಸ್ ಮೈಲಾರೇಶ್ವರ ದೇವಾಲಯದ ಬಳಿ ಬರುವಾಗ, ಚಾಲಕ ಬ್ರೇಕ್ ಹಾಕಿದ್ದಾನೆ. ಇದಕ್ಕಿದ್ದಂತೆ ಬ್ರೇಕ್ ಬಿದ್ದ ಹಿನ್ನೆಲೆಯಲ್ಲಿ ಪುಟ್ ಬೋರ್ಡ್ನ ಮೇಲಿದ್ದ ವಿದ್ಯಾರ್ಥಿ ಬಸ್‌ನಿಂದ ಕೆಳಕ್ಕೆ ಬಿದ್ದಿದ್ದಾನೆ. ಘಟನೆಯ ಸಂಬಂಧ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಸಿಟಿ ಬಸ್‌ಗಳಲ್ಲಿ ಒಳಗೆ ಸ್ಥಳವಾಕಾಶ ಇದ್ದರೂ ವಿದ್ಯಾರ್ಥಿಗಳು ಫುಟ್ ಬೋರ್ಡ್ ಮೇಲೆ ನಿಂತು ಶೋಕಿ ಮಾಡುವುದು ಸಾಮಾನ್ಯವಾಗಿದೆ. ಬೆಳಗ್ಗೆ 10 ಗಂಟೆವರೆಗೂ ಟ್ರಾಫಿಕ್ ಪೊಲೀಸರು ಸಹ ಇಲ್ಲದ ಕಾರಣ ನಿಗಾ ವಹಿಸುವವರು ಯಾರೂ ಇಲ್ಲದಾಗಿದೆ. ಸಿಸಿ ಕ್ಯಾಮೆರಾಗಳು ಸಿಗ್ನಲ್ ಜಂಪ್ ಮಾಡಿದರೆ ಮಾತ್ರ ಸೆರೆ ಹಿಡಿಯತ್ತವೆ.