Header Ads Widget

ದುಬೈನ ವಿದ್ವಾರ್ಸ್ ಬಾಯ್ಸ್ ತಂಡಕ್ಕೆ ಚಾಂಪಿಯನ್ ಟ್ರೋಫಿ.

                                  

ದುಬೈಯ ಅಜ್ಮಾನ್ ರಾಯಲ್ ಮೈದಾನದಲ್ಲಿ ಜರಗಿದ ಯು.ಎ.ಇ ಯ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾ ಕೂಟದಲ್ಲಿ ದುಬೈನ ವಿದ್ವಾರ್ಸ್ ಕ್ರಿಕೆಟ್ ತಂಡವು ಚಾಂಪಿಯನ್ ತಂಡವಾಗಿ ಎ-7 ಟ್ರೋಫಿ ಯನ್ನು ಮುಡಿಗೇರಿಸಿಕೊಂಡಿತು.


ದುಬೈನ ಕನ್ನಡಿಗರ ಬಳಗದ ಶ್ರೀಸಾಹಿಲ್ ನೆಲೆಯಾಡಿ ಹಾಗೂ ಸ್ನೇಹಿತರು ಆಯೋಜಿಸಿದ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನ್ನಡಿಗರಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗಿತ್ತು.ಪ್ರತಿತಂಡವು ಗರಿಷ್ಠ ಇಬ್ಬರು ಕರ್ನಾಟಕೇತರ ಆಟಗಾರರನ್ನು ಮಾತ್ರ ಹೊಂದಿರಬಹುದು.


ದುಬೈನಲ್ಲಿ ನೆಲೆಸಿರುವ ಕನ್ನಡಿಗರ ಬಲಿಷ್ಠ ಹತ್ತುತಂಡಗಳು ಈ ಕ್ರಿಕೆಟ್ ಕೂಟದಲ್ಲಿ ಪಾಲ್ಗೊಂಡಿದ್ದು ಲೀಗ್ ಮಾದರಿಯಲ್ಲಿ ಈ  ಪಂದ್ಯಾವಳಿಯು ಜರಗಿತ್ತು.


ಬಹುತೇಕ ಉಡುಪಿ ಮಂಗಳೂರು ಕುಂದಾಪುರದ ಆಟಗಾರರನ್ನೇ ಹೊಂದಿದ್ದ ವಿದ್ಯಾನಂದ ಶೆಟ್ಟಿ ಹಾಗೂ ಪ್ರವೀಣ್ ಶೆಟ್ಟಿ ಒಡೆತನದ ವಿದ್ವಾರ್ಸ ಬಾಯ್ಸ್ ತಂಡವು ತೀವ್ರ ಜಿದ್ದಾಜಿದ್ದಿನ ಹೋರಾಟದಲ್ಲಿ ಮಂಗಳೂರಿನ ಟೀಮ್ ಎಲೀಗೆಂಟ್ ತಂಡವನ್ನು ಒಂದು ರನ್ನುಗಳ ಕೂದಲೆಳೆಯ ಅಂತರದಲ್ಲಿ ಸೋಲಿಸಿ ಮಿನುಗುವ ಎ-ಸೆವೆನ್ ಟ್ರೋಫಿ ಸಹಿತ 10-000 ಧೀರಮ್ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.


ಕುಂದಾಪುರ ಸಮೀಪದ ಸೂರಾಲಿನ ವಿಠಲ್ ರಿಶಾನ್ ನಾಯಕ್ ಅವರ ಅನುಭವೀ ಮಾರ್ಗದರ್ಶನ ದೊಂದಿಗೆ ಎಂಬಿರವರನಾಯಕತ್ವ ಹಾಗೂ ವೈಭವರವರ ಉಪನಾಯಕತ್ವ ಉಳಿದಂತೆ ತನ್ಶೀರ್, ನದೀರ್, ಶಾಬುದೀನ್, ಅಂಕಿತ್, ಪ್ರತಮೇಶ್ ಚಿಕ್ಕು, ರೋಹಿತ್ ಪುಟ್ಟ, ನೌಫಲಅಪ್ಪು, ಪ್ರಣೀತ, ನಿಕೇತನ, ಆಕಾಶ್, ಜುನೈದಾ, ರತನ್ ಆಟಗಾರರೊಂದಿಗೆ ಕಣಕ್ಕೆ ಇಳಿದಿತ್ತು. 


ರೋಮಾಂಚಕವಾಗಿ ನಡೆದ ಫೈನಲ ಪಂದ್ಯದಲ್ಲಿ ವಿದ್ವಾರ್ಸ ಬಾಯ್ಸ್ ತಂಡದ ಭರ್ಜರಿ ಪ್ರದರ್ಶನವು ಭಾರೀ ಜನಮನ್ನಣೆ ಗಳಿಸಿತು.


2024ರಲ್ಲಿ ಜರಗಿದ ಪ್ರತಿಷ್ಠಿತ ಯಕ್ಷ ಪ್ರೀಮಿಯರ್ ಲೀಗ್ ಟ್ರೋಫಿ ಹಾಗೂ ಕರ್ನಾಟಕ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಈಗಾಗಲೇ ವಿದ್ವಾರ್ಸ್ ಬಾಯ್ಸ್ ತಂಡವು ಬಗಲಿಗೇರಿಸಿಕೊಂಡಿದೆ.


ಬಹುಮಾನ ಸಮಾರಂಭದಲ್ಲಿ ದುಬೈನ ಪ್ರಸಿದ್ಧ ಉದ್ಯಮಿಗಳು ಹಾಗೂ,ನೆಲೆಯಾಡಿ ಸ್ನೇಹ ಬಳಗದ ಶ್ರೀಯುತ ಸಾಹಿಲ್ ನೆಲೆಯಾಡಿ ಮತ್ತು ಸ್ನೇಹಿತರು ಮುಖ್ಯಸ್ಥರು ಪಾಲ್ಗೊಂಡಿದ್ದರು.