ವೈಷ್ಣವ್ ಲಕ್ಷ್ಮೀನಾರಾಯಣ ಉಪಾಧ್ಯ ಇವರು ಟಿ.ಎ.ಪೈ.ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಕುಂಜಿಬೆಟ್ಟು ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಯಾಗಿದ್ದು , ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಸತತ ಮೂರು ವರ್ಷಗಳ ಕಾಲ ಆಯ್ಕೆಯಾಗಿ ರುತ್ತಾರೆ.
ಇವರಿಗೆ ಕರ್ನಾಟಕ ಸರ್ಕಾರ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧಾರಣ ಸಾಧನೆ ಮಾಡಿದ ಜಿಲ್ಲಾಮಟ್ಟದ 2024-25ನೇಯ ಸಾಲಿನ ಪ್ರಶಸ್ತಿ ಪತ್ರವನ್ನು ದಿನಾಂಕ 26.01.2025ರಂದು ಗಣರಾಜೋತ್ಸವದ ಪ್ರಯುಕ್ತ ಮಹಾತ್ಮ ಗಾಂಧಿ ಕ್ರೀಡಾಂಗಣ ಅಜ್ಜರ ಕಾಡು ಇಲ್ಲಿ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಇವರಿಂದ ಪಡೆದರು.
ಇವರು ಉಡುಪಿ ಅಂಬಲಪಾಡಿಯ ಹರ್ಷಿಣಿ ಮತ್ತು ಶ್ರೀ ಲಕ್ಷ್ಮೀನಾರಾಯಣ ಉಪಾಧ್ಯ ಇವರ ಸುಪುತ್ರ. ಮುಖ್ಯ ಶಿಕ್ಷಕಿ ವಿನೋದಾ ಶೆಟ್ಟಿ ಮತ್ತು ದೈಹಿಕ ಶಿಕ್ಷಕ ಸುಧೀರ್ ಕುಮಾರ್ ಅವರು ವೈಷ್ಣವ್ ರವ ರನ್ನು ಅಭಿನಂದಿಸಿದ್ದಾರೆ.