ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧ ಗಾಯಕ ಹಾಗೂ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿ ಯವರಿಗೆ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಯನ್ನು ಸನ್ಮಾನ್ಯ ಶಾಸಕರಾದ ಸಿ. ಎಸ್ ನಾಡಗೌಡ (ಅಪ್ಪಾಜಿ) ಯವರು ಗಣ್ಯರ ಸಮ್ಮುಖದಲ್ಲಿ ಪ್ರಧಾನ ಮಾಡಿದವರು ವೇದಿಕೆಯಲ್ಲಿ ಸಿದ್ಧನ ಕೊಳ ನಿರಂತರ ದಾಸೋಹ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು, ಜ್ಯೋತಿಷ ರತ್ನ ಮಠದ ಪೂಜ್ಯ ರಾಮಲಿಂಗಯ್ಯ ಸ್ವಾಮೀಜಿ, ಅಪರ ಜಿಲ್ಲಾಧಿಕಾರಿ ಗಳಾದ ಮಾನ್ಯ ಸೋಮಲಿಂಗ ಗಣ್ಣೂರು ಹಾಗೂ ಬಾಗಲಕೋಟೆ ಜಿಲ್ಲಾ ಉಪ ಕಾರ್ಯದರ್ಶಿಗಳಾದ ಮಾನ್ಯ ಪುನೀತ್ ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಚಲನಚಿತ್ರ ನಟರು ಹಿರಿಯ ಗಾಯಕರಾದ ಶ್ರೀ ಗುರುರಾಜ ಹೊಸಕೋಟೆ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್.ಜಿ . ಲೋಣಿ, ಹಾಗೂ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ. ಎಸ್ ಬಾಲಾಜಿಯವರು ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದಣ್ಣ ದುರ್ಡುಂಡಿ, ವಿಜಯಪುರ ಜಿಲ್ಲಾ ಧ್ಯಕ್ಷರಾದ ಶ್ರೀ ಪುಂಡಲೀಕ ಮುರಾಳ , ಮಲ್ಲಿಕಾರ್ಜುನ ಮದಲಿ ಉಪಸ್ಥಿತರಿದ್ದರು , ಸಾವಿರಾರು ಯುವ ಸಂಘಗಳ ಪದಾಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.