ಹುಕ್ಕೇರಿ ಹಿರೇಮಠ ಶ್ರೀ ಷ. ಬ್ರ. ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯ ಫೆಬ್ರವರಿ 25 ಮಂಗಳವಾರ, ಬೆಳಗ್ಗೆ 10:00 ಗಂಟೆಗೆ
ಅಂಬಲಪಾಡಿ ಮಹಾಕಾಳಿ ದೇವಸ್ಥಾನದ ಸಭಾ ಮಂಟಪದಲ್ಲಿ ಸಾಮೂಹಿಕ ಪೂಜೆಯಲ್ಲಿ ಭಕ್ತರಿಗೆ ಇಷ್ಟಲಿಂಗ ಪೂಜೆಯ ಮಹತ್ವ. ಇಷ್ಟಲಿಂಗ ಪೂಜೆ ವಿಧಿ ವಿಧಾನಗಳು ಇಷ್ಟಲಿಂಗ ಪೂಜೆಯಿಂದ ದೊರೆಯುವ ವೈಜ್ಞಾನಿಕ ಲಾಭ ಆಧ್ಯಾತ್ಮಿಕ ಲಾಭ ಹಾಗೂ ಮಾನಸಿಕ ಲಾಭಗಳನ್ನು ತಿಳಿಸಿಕೊಡ ಲಿದ್ದಾರೆ. ಇಷ್ಟಲಿಂಗ ಪೂಜೆ ನೆರವೆರಿಸಿ ಭಕ್ತಾದಿಗಳಿಗೆ ಆಶೀರ್ವಾದಿಸುವರು.
ಇಷ್ಟಲಿಂಗ ಪೂಜೆಯ ಮಹತ್ವ : ವೀರಶೈವ ಲಿಂಗಾಯತ ಧರ್ಮಕ್ಕೆ ಇಷ್ಟಲಿಂಗ ಪೂಜೆಯ ಮಹತ್ವ ಇದೆ. ಪೂಜೆಗೆ ನೀರು ಎಷ್ಟು ಮುಖ್ಯವೊ ಅಷ್ಟೇ ನೀನು ಮುಖ್ಯ, ಅಂದರೆ ಇಷ್ಟಲಿಂಗ ಪೂಜೆಯಲ್ಲಿ ನಿನ್ನನ್ನು ನೀನು ಅರಿತು ಲಿಂಗದಲ್ಲಿ ನಿನ್ನ ಧ್ಯಾನವನ್ನು ಇಟ್ಟು ಶಿವನಲ್ಲಿ ಭಕ್ತಿಯಲ್ಲಿ ಕೇಂದ್ರಿಕೃತ ನಾಗಲು ಇಷ್ಟಲಿಂಗ ಬಹುಮುಖ್ಯವಾಗಿದೆ.
‘ಪೂಜೆಗೆ ಏನು ಅರ್ಪಿಸುತ್ತೇನೆ ಎನ್ನುವುದು ಮುಖ್ಯವಲ್ಲ. ಪೂಜೆಗೆ ನಾನು ಎಷ್ಟು ನಿಷ್ಠೆ ಮತ್ತು ಭಕ್ತಿಯಿಂದ ಇದ್ದೇನೆ ಎನ್ನುವುದು ಮುಖ್ಯವಾಗಿದೆ’. ‘ಲಿಂಗಧಾರಣೆ ಮಾಡುವುದರಿಂದ ನಮ್ಮ ಪಾಪಗಳು ದೂರವಾಗಿ ನಮಗೆ ಅಂಟಿಕೊಳ್ಳುವ ಪಾಪಗಳನ್ನು ಲಿಂಗವು ರಕ್ಷಣೆ ನೀಡುತ್ತದೆ ಮತ್ತು ಆರೋಗ್ಯವಂತ ರಾಗಿರುತ್ತಾರೆ. ಸಮಾಜದ ಹಿರಿಯ ಸ್ವಾಮಿಗಳು ನೂರಾರು ವರ್ಷಗಳ ಕಾಲ ಬದುಕುವುದಕ್ಕೆ ಅವರಿಗೆ ಇಷ್ಟಲಿಂಗವೇ ಕಾರಣವಾಗಿದೆ. ಅವರು ಎಂದೂ ಇಷ್ಟಲಿಂಗ ಪೂಜೆ ಇಲ್ಲದೆ ಇರುವುದಿಲ್ಲ.
ಲಿಂಗಧಾರಣೆಗೆ ಮಾಡುವುದಕ್ಕೆ ಯಾವುದೇ ಜಾತಿ ಧರ್ಮದ ಕಟ್ಟೆಳೆಗಳು ಇಲ್ಲ. ಪ್ರತಿಯೊಂದು ಜಾತಿ ಯವರು ದೇವರ ಸ್ಮರಣೆ ಮಾಡುವುದು ಮತ್ತು ದೇವರಲ್ಲಿ ತನ್ನನ್ನು ಕೇಂದ್ರೀಕರಿಸುವಂಥ ಕಾರ್ಯವಾಗಿ ರುವ ಲಿಂಗಪೂಜೆಗೆ ಯಾವುದೇ ತಾರತಮ್ಯ ಇಲ್ಲ.
ಶ್ರೀಗಳ ಪ್ರವಾಸ ವಿವರ : ಫೆಬ್ರವರಿ 24 ಸೋಮವಾರ ಸಂಜೆ 3:00 ಗಂಟೆಗೆ ಮಂಗಳೂರಿನ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ. ಸಂಜೆ 5:00 ಗಂಟೆಗೆ- ಓಂ ಶ್ರೀ ಮಠದಲ್ಲಿ ಜರುಗುತ್ತಿರುವ ಪಂಚಾಕ್ಷರಿ ಲಕ್ಷಾರ್ಚನೆ ಯಜ್ಞ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಫೆಬ್ರವರಿ 25 ಮಂಗಳವಾರ, ಬೆಳಗ್ಗೆ 10:00 ಗಂಟೆಗೆ, ಅಂಬಲಪಾಡಿ ಮಹಾಕಾಳಿ ದೇವಸ್ಥಾನದ ಸಭಾ ಮಂಟಪದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ.
ಸಂಜೆ 6:00 ಗಂಟೆಗೆ: ಉಡುಪಿಯ ಕಾಪುಶ್ರೀ ಮಾರಿಕಾಂಬಾ ದೇವಸ್ಥಾನದ ಬ್ರಹ್ಮ ಕಲಶ ಕಾರ್ಯಕ್ರಮ ದಲ್ಲಿ ಭಾಗವಹಿಸುವರು. ಬಳಿಕ ಉಡುಪಿಯ ಮನೆಯ ಭಕ್ತರ ಮನೆಯಲ್ಲಿ ವಾಸ್ತವ್ಯ
ಫೆಬ್ರವರಿ 26 ಬುಧವಾರ, ಬೆಳಗ್ಗೆ 10:00 ಗಂಟೆಗೆ, ಸೊರ್ಕಳ ಜಂಗಮ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿಗೆ ರುದ್ರಾಭಿಷೇಕ ಮತ್ತು ಇಷ್ಟಲಿಂಗ ಪೂಜೆ ನೆರವೆರಿಸಿ ಭಕ್ತಾದಿಗಳಿಗೆ ಆಶೀರ್ವಾದಿಸುವರು.
ಹೆಚ್ಚಿನ ಮಾಹಿತಿಗಾಗಿ ಉಡುಪಿಯ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ 9731778737 ಇವರನ್ನು ಸಂಪರ್ಕಿಸಬಹುದು ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.